Impu - Melodious
Friday, 16 February 2018
ಹುಟ್ಟುವ ಮೊದಲೇ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ದಾಖಲೆ ಮಾಡಿದ ಕಂದ
ಹುಟ್ಟುವ ಮೊದಲೇ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ದಾಖಲೆ ಮಾಡಿದ ಕಂದ
ಪ್ಯಾಶನ್ ಇದ್ದರೆ ಯಾವುದೇ ರಿಸ್ಕಿಗೂ ರೆಡಿಯೇ---
ಹೌದು ನಮ್ಮಲ್ಲಿ ಯಾವುದೇ ವಿಷಯ ವಸ್ತುವ್ಯಕ್ತಿಯ ಬಗ್ಗೆ ಪ್ಯಾಶನ್ ಇದ್ದಾಗ ಅದಕ್ಕಾಗಿ ಯಾವುದೇ ರೇಂಜ್ ನ ರಿಸ್ಕ್ ತೆಗೆದುಕೊಳ್ಳಲು ರೆಡಿಯಾಗಿಬಿಡುತ್ತೇವೆ.
ಕಲರ್ಸ್ ಸೂಪರ್ ಚಾನೆಲ್ ನ ಮಾಸ್ಟರ್ ಡ್ಯಾನ್ಸರ್ ಆಡಿಶನ್ ರೌಂಡ್ ನೋಡುತ್ತಿದ್ದೆ, ನರ್ತಿಸಲು ಬಂದವರು ತಾಯಿ-ಮಗಳು. ಅವರು ಶಿವಮೊಗ್ಗದ ಶಾರ್ವರಿ ಮತ್ತು ವರ್ಷಿಣಿ.ತಾಯಿಯ ಭಾರವಾದ ದೇಹ ನೋಡಿ ಇದೇನಪ್ಪಾ ಭರತನಾಟ್ಯ ಮಾಡುವವರಿಗೆ ಹೀಗೆಲ್ಲಾ ಭಾರೀ ದೇಹ ಇರೊಲ್ಲ ಅಲ್ಲವಾ ಅಂದ್ಕೊಳ್ತಾನೇ ಇದ್ದೆ, ನೃತ್ಯ ಮುಗಿಯಿತು, ಆಂಕರ್ ಅಕುಲ್ ಸ್ಟೇಜ್ ಗೆ ಬಂದರು, ತಾಯಿ ಮಗಳೊಂದಿಗೆ ಮಾತನಾಡುತ್ತಾ ನಿಮಗೆಷ್ಟು ಮಕ್ಕಳು? ಎಂದು ಪ್ರಶ್ನಿಸಿದಾಗ ಆ ತಾಯಿ ಇವಳು ನನ್ನ ಮೊದಲ ಮಗಳು ,ಎರಡನೆಯ ಮಗು ಗೆ ಈಗ ಆರ್ ತಿಂಗ್ಳು-ಇನ್ನು ಮೂರು ತಿಂಗಳಿಗೆ ಅವಳು ನಮ್ಮ ಹತ್ತಿರ ಬರ್ತಾಳೆ ಎಂದುತ್ತರ ನೀಡಿ ತಾನು "ಆರು ತಿಂಗಳ ಗರ್ಭಿಣಿ"ಎಂದುಲಿದಾಗ ಶಾಕ್ ಆಯ್ತು, ಗರ್ಭಿಣಿ ಮಹಿಳೆ ವಿಶ್ರಾಂತಿಯಲ್ಲಿರಬೇಕು, ಶ್ರಮದ ಕೆಲಸ ಮಾಡಬಾರದು ಎಂಬುದೇ ನಮಗೆಲ್ಲ ತಿಳಿದಿರುವ ವಿಚಾರ, ಆದರೆ ಈ ತಾಯಿ ಅರು ತಿಂಗಳ ಗರ್ಭ ಹೊತ್ತಾಕೆ ತನ್ನ ಐದು ವರ್ಷದ ಮಗಳಿಗೆ ತಾನೇ ನೃತ್ಯಗುರುವಾಗಿ ನೃತ್ಯ ಕಲಿಸಿ ಪ್ರಾಕ್ಟೀಸ್ ಮಾಡಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಮಾಸ್ಟರ್ ಡ್ಯಾನ್ಸರ್ ಸ್ಟೇಜ್ ನಲ್ಲಿ ಮಗಳೊಂದಿಗೆ ನೃತ್ಯವನ್ನೂ ಮಾಡಿದರೆಂದರೆ??? ಅಬ್ಬಾ ಹೀಗೂ ಉಂಟೆ ????ಎನಿಸಿಬಿಟ್ಟಿತು,
ತೀರ್ಪುಗಾರರಿಗೂ ಸಖ್ಖತ್ ಅಚ್ಚರಿ ಆಗಿತ್ತು, ಈ ಸ್ಥಿತಿಯಲ್ಲಿಯೂ ಈ ಸ್ಪರ್ಧೇಲಿ ಭಾಗವಹಿಸಬೇಕೆನ್ನಿಸಿತೇಕೆ ನಿಮಗೆ ಎಂದು ಮಯೂರಿಯವರು ಪ್ರಶ್ನಿಸಿದಾಗ "ನನಗೆ ಡ್ಯಾನ್ಸ್ ಬಹಳ ಇಷ್ಟ ಈ ಅವಕಾಶ ಬಿಡಬಾರದು ಎಂದು ಭಾಗವಹಿಸಿದೆ ಎಂದರು ಇನ್ನೊಬ್ಬ ತೀರ್ಪುಗಾರ್ತಿ ಶೃತಿ ಹರಿಹರನ್"ಪ್ರೆಗ್ನೆನ್ಸಿ ನ ಎಂಜಾಯ್ ಮಾಡ್ಬೇಕು ಅಂತಾರೆ-ನೀವು ನಿಜಕ್ಕೂ ನಿಮ್ಮ ಪ್ರೆಗ್ನೆನ್ಸಿ ಎಂಜಾಯ್ ಮಾಡ್ತಿದೀರ ತುಂಬಾ ಇಷ್ಟ ಆಯ್ತು-ಹ್ಯಾಟ್ಸ್ ಆಫ್ "ಎಂದರೆ ಚಂದನ್ ನಿಮ್ಮ ಪ್ಯಾಶನ್ ಗೆ ನನ್ನ ಸೆಲ್ಯೂಟ್ಸ್ ಅಂದರು.ಈ ಅಮ್ಮ -ಮಕ್ಕಳ ಜೋಡಿಗೆ ಗೋಲ್ಡ್ ಅಥವಾ ಸಿಲ್ವರ್ ಟಿಕೆಟ್ ಸಿಗಲಿಲ್ಲ -ಚಾಕಲೇಟ್ ಸಿಕ್ಕಿತು-ಇನ್ನು ಮೂರು ತಿಂಗಳ ನಂತರ ಬರಲಿರುವ ಕಂದಮ್ಮನಿಗಾಗಿ ಮತ್ತವಳ ಪುಟ್ಟ ಅಕ್ಕನಿಗಾಗಿ.ನಂಗೆನೋ ಸಧ್ಯ- ಇವರಿಗೆ ಚಾಕಲೇಟ್ ಕೊಟ್ಟಿದ್ದೇ ಸರಿ,ಎಂಟ್ರಿ ಟಿಕೆಟ್ ಏನಾದ್ರೂ ಕೊಟ್ಟಿದ್ರೆ ಈ ತಾಯಿ ಬಿಡದೇ ಮತ್ತಷ್ಟು ನರ್ತಿಸುವ ರಿಸ್ಕ್ ತಗೊಂಡೇ ಬಿಡ್ತಿದ್ರೇನೋ-ಸಧ್ಯ ತಪ್ಪಿತು ರಿಸ್ಕ್ ಮತ್ತು ನಮಗೆ ಅದನ್ನು ನೋಡುವ ರಿಸ್ಕ್ ಕೂಡಾ ಎನಿಸಿತು,
ನಂಗಂತೂ ಈ ಸ್ಪರ್ಧಿಯನ್ನು ಮರೆಯೋಕ್ಕೇ ಆಗ್ತಿಲ್ಲ-ಈ ಶೋ ಮುಗಿಯೋ ಹೊತ್ತಿಗೆ ಅಮ್ಮನ ಗರ್ಭದಿಂದ ತಾನುಹುಟ್ಟೋಕ್ಕೆ ಮುಂಚೇನೇ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ದಾಖಲೆ ಮಾಡಿರುವ ಪುಟಾಣಿ ಧರೆಗೆ ಇಳಿದು ಬಂದಿರುತ್ತೆ,ಅದನ್ನು ಖಂಡಿತಾ ಫಿನಾಲೇಗೆ ಕರೆಸಿಬಿಡಿ ಕಲರ್ಸ್ ಸೂಪರ್.ಅದೂ ಒಂದು ದಾಖಲೆ ಆಗತ್ತೆ
ಪ್ಯಾಶನ್ ಇದ್ದರೆ ಯಾವುದೇ ರಿಸ್ಕಿಗೂ ರೆಡಿಯೇ---
ಹೌದು ನಮ್ಮಲ್ಲಿ ಯಾವುದೇ ವಿಷಯ ವಸ್ತುವ್ಯಕ್ತಿಯ ಬಗ್ಗೆ ಪ್ಯಾಶನ್ ಇದ್ದಾಗ ಅದಕ್ಕಾಗಿ ಯಾವುದೇ ರೇಂಜ್ ನ ರಿಸ್ಕ್ ತೆಗೆದುಕೊಳ್ಳಲು ರೆಡಿಯಾಗಿಬಿಡುತ್ತೇವೆ.
ಕಲರ್ಸ್ ಸೂಪರ್ ಚಾನೆಲ್ ನ ಮಾಸ್ಟರ್ ಡ್ಯಾನ್ಸರ್ ಆಡಿಶನ್ ರೌಂಡ್ ನೋಡುತ್ತಿದ್ದೆ, ನರ್ತಿಸಲು ಬಂದವರು ತಾಯಿ-ಮಗಳು. ಅವರು ಶಿವಮೊಗ್ಗದ ಶಾರ್ವರಿ ಮತ್ತು ವರ್ಷಿಣಿ.ತಾಯಿಯ ಭಾರವಾದ ದೇಹ ನೋಡಿ ಇದೇನಪ್ಪಾ ಭರತನಾಟ್ಯ ಮಾಡುವವರಿಗೆ ಹೀಗೆಲ್ಲಾ ಭಾರೀ ದೇಹ ಇರೊಲ್ಲ ಅಲ್ಲವಾ ಅಂದ್ಕೊಳ್ತಾನೇ ಇದ್ದೆ, ನೃತ್ಯ ಮುಗಿಯಿತು, ಆಂಕರ್ ಅಕುಲ್ ಸ್ಟೇಜ್ ಗೆ ಬಂದರು, ತಾಯಿ ಮಗಳೊಂದಿಗೆ ಮಾತನಾಡುತ್ತಾ ನಿಮಗೆಷ್ಟು ಮಕ್ಕಳು? ಎಂದು ಪ್ರಶ್ನಿಸಿದಾಗ ಆ ತಾಯಿ ಇವಳು ನನ್ನ ಮೊದಲ ಮಗಳು ,ಎರಡನೆಯ ಮಗು ಗೆ ಈಗ ಆರ್ ತಿಂಗ್ಳು-ಇನ್ನು ಮೂರು ತಿಂಗಳಿಗೆ ಅವಳು ನಮ್ಮ ಹತ್ತಿರ ಬರ್ತಾಳೆ ಎಂದುತ್ತರ ನೀಡಿ ತಾನು "ಆರು ತಿಂಗಳ ಗರ್ಭಿಣಿ"ಎಂದುಲಿದಾಗ ಶಾಕ್ ಆಯ್ತು, ಗರ್ಭಿಣಿ ಮಹಿಳೆ ವಿಶ್ರಾಂತಿಯಲ್ಲಿರಬೇಕು, ಶ್ರಮದ ಕೆಲಸ ಮಾಡಬಾರದು ಎಂಬುದೇ ನಮಗೆಲ್ಲ ತಿಳಿದಿರುವ ವಿಚಾರ, ಆದರೆ ಈ ತಾಯಿ ಅರು ತಿಂಗಳ ಗರ್ಭ ಹೊತ್ತಾಕೆ ತನ್ನ ಐದು ವರ್ಷದ ಮಗಳಿಗೆ ತಾನೇ ನೃತ್ಯಗುರುವಾಗಿ ನೃತ್ಯ ಕಲಿಸಿ ಪ್ರಾಕ್ಟೀಸ್ ಮಾಡಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಮಾಸ್ಟರ್ ಡ್ಯಾನ್ಸರ್ ಸ್ಟೇಜ್ ನಲ್ಲಿ ಮಗಳೊಂದಿಗೆ ನೃತ್ಯವನ್ನೂ ಮಾಡಿದರೆಂದರೆ??? ಅಬ್ಬಾ ಹೀಗೂ ಉಂಟೆ ????ಎನಿಸಿಬಿಟ್ಟಿತು,
ತೀರ್ಪುಗಾರರಿಗೂ ಸಖ್ಖತ್ ಅಚ್ಚರಿ ಆಗಿತ್ತು, ಈ ಸ್ಥಿತಿಯಲ್ಲಿಯೂ ಈ ಸ್ಪರ್ಧೇಲಿ ಭಾಗವಹಿಸಬೇಕೆನ್ನಿಸಿತೇಕೆ ನಿಮಗೆ ಎಂದು ಮಯೂರಿಯವರು ಪ್ರಶ್ನಿಸಿದಾಗ "ನನಗೆ ಡ್ಯಾನ್ಸ್ ಬಹಳ ಇಷ್ಟ ಈ ಅವಕಾಶ ಬಿಡಬಾರದು ಎಂದು ಭಾಗವಹಿಸಿದೆ ಎಂದರು ಇನ್ನೊಬ್ಬ ತೀರ್ಪುಗಾರ್ತಿ ಶೃತಿ ಹರಿಹರನ್"ಪ್ರೆಗ್ನೆನ್ಸಿ ನ ಎಂಜಾಯ್ ಮಾಡ್ಬೇಕು ಅಂತಾರೆ-ನೀವು ನಿಜಕ್ಕೂ ನಿಮ್ಮ ಪ್ರೆಗ್ನೆನ್ಸಿ ಎಂಜಾಯ್ ಮಾಡ್ತಿದೀರ ತುಂಬಾ ಇಷ್ಟ ಆಯ್ತು-ಹ್ಯಾಟ್ಸ್ ಆಫ್ "ಎಂದರೆ ಚಂದನ್ ನಿಮ್ಮ ಪ್ಯಾಶನ್ ಗೆ ನನ್ನ ಸೆಲ್ಯೂಟ್ಸ್ ಅಂದರು.ಈ ಅಮ್ಮ -ಮಕ್ಕಳ ಜೋಡಿಗೆ ಗೋಲ್ಡ್ ಅಥವಾ ಸಿಲ್ವರ್ ಟಿಕೆಟ್ ಸಿಗಲಿಲ್ಲ -ಚಾಕಲೇಟ್ ಸಿಕ್ಕಿತು-ಇನ್ನು ಮೂರು ತಿಂಗಳ ನಂತರ ಬರಲಿರುವ ಕಂದಮ್ಮನಿಗಾಗಿ ಮತ್ತವಳ ಪುಟ್ಟ ಅಕ್ಕನಿಗಾಗಿ.ನಂಗೆನೋ ಸಧ್ಯ- ಇವರಿಗೆ ಚಾಕಲೇಟ್ ಕೊಟ್ಟಿದ್ದೇ ಸರಿ,ಎಂಟ್ರಿ ಟಿಕೆಟ್ ಏನಾದ್ರೂ ಕೊಟ್ಟಿದ್ರೆ ಈ ತಾಯಿ ಬಿಡದೇ ಮತ್ತಷ್ಟು ನರ್ತಿಸುವ ರಿಸ್ಕ್ ತಗೊಂಡೇ ಬಿಡ್ತಿದ್ರೇನೋ-ಸಧ್ಯ ತಪ್ಪಿತು ರಿಸ್ಕ್ ಮತ್ತು ನಮಗೆ ಅದನ್ನು ನೋಡುವ ರಿಸ್ಕ್ ಕೂಡಾ ಎನಿಸಿತು,
ನಂಗಂತೂ ಈ ಸ್ಪರ್ಧಿಯನ್ನು ಮರೆಯೋಕ್ಕೇ ಆಗ್ತಿಲ್ಲ-ಈ ಶೋ ಮುಗಿಯೋ ಹೊತ್ತಿಗೆ ಅಮ್ಮನ ಗರ್ಭದಿಂದ ತಾನುಹುಟ್ಟೋಕ್ಕೆ ಮುಂಚೇನೇ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ದಾಖಲೆ ಮಾಡಿರುವ ಪುಟಾಣಿ ಧರೆಗೆ ಇಳಿದು ಬಂದಿರುತ್ತೆ,ಅದನ್ನು ಖಂಡಿತಾ ಫಿನಾಲೇಗೆ ಕರೆಸಿಬಿಡಿ ಕಲರ್ಸ್ ಸೂಪರ್.ಅದೂ ಒಂದು ದಾಖಲೆ ಆಗತ್ತೆ
Sunday, 29 October 2017
WORKING WOMEN AND DRESS CODE ದುಡಿವ ಮಹಿಳೆಯ ಉಡುಗೆ-ತೊಡುಗೆ
Albums
WORKING WOMEN AND DRESS CODE ದುಡಿವ ಮಹಿಳೆಯ ಉಡುಗೆ-ತೊಡುಗೆ
59 Photos · Updated 2 years ago
WORKING WOMEN AND DRESS CODE ದುಡಿವ ಮಹಿಳೆಯ ಉಡುಗೆ-ತೊಡುಗೆ ನಾವು ಧರಿಸುವ ಉಡುಪು ನಮ್ಮ ವ್ಯಕ್ತಿತ್ವ ತಿಳಿಸುತ್ತದೆ ಎಂಬ ಮಾತಿದೆ, ಹಾಗೆಯೇ ಉಡುಪಿನಿಂದ ವ್ಯಕ್ತಿಯ ವ್ಯಕ್ತಿತ್ವ ಅಳೆಯಲಾಗದು ಎಂಬ ಉಕ್ತಿಯೂ ಇದೆ.ಆದರೆ ಮನೆಯಿಂದ ಹೊರಗೆ ಹೋಗಿ ದುಡಿಯುವ ಮಹಿಳೆ ಮನೆಯಲ್ಲಿ ಧರಿಸುವ ಉಡುಪನ್ನೇ ಹೊರಗೂ ಧರಿಸುವ ಹಾಗಿಲ್ಲ.ಮನೆಯಲ್ಲಿ ಎನೇ ಉಡುಪು ಧರಿಸಿ ಹೇಗೇ ಇದ್ದರೂ ನಡೆಯುತ್ತೆ. ಆದರೆ ಹೊರಗೆ ಕಚೇರಿಯಲ್ಲಿ ಹಲವರ ಜೊತೆಯಲ್ಲಿ ಕೆಲಸ ಮಾಡುವ ಮಹಿಳೆ ಅಲ್ಲಿಯ ವಾತಾವರಣಕ್ಕೆ ತಕ್ಕಂತಹ ಉಡುಪು ಧರಿಸಬೇಕಾದದ್ದು ಅಗತ್ಯ.ದುಡಿಯುವ ಮಹಿಳೆಯ ಉಡುಪೂ ಸಹ ಅವಳ ವೃತ್ತಿಯ ಯಶಸ್ಸಿನಲ್ಲಿ ಮುಖ್ಯ ಪಾತ್ರವನ್ನೇ ವಹಿಸುತ್ತದೆ.ಮೊದಲಿಗೆ ಉದ್ಯೋಗ ಹುಡುಕಿಕೊಂಡು ಹೋಗುವ ಮಹಿಳೆಯನ್ನು ಉದ್ಯೋಗದಾತರು ಅವಳನ್ನು ಕೆಲಸಕ್ಕೆ ತೆಗೆದುಕೊಳ್ಳುವುದೋ ಬಿಡುವುದೋ ಎಂಬ ನಿರ್ಣಯ ಮಾಡುವಲ್ಲಿ ಅವಳ ಉಡುಪೂ ಸಹ ಅವಳಬಗ್ಗೆ ಅಭಿಪ್ರಾಯ ರೂಪಿಸುವಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತದೆ. ಸಾಧಾರಣವಾಗಿ ದುಡಿಯುವ ಮಹಿಳೆಯ ಉಡುಪು ಹೀಗಿರಬೇಕು ಎಂಬ ಮಾರ್ಗದರ್ಶಿ ಸೂತ್ರ,ನಿಯಮ ಕೆಲಸದಿಂದ ಕೆಲಸಕ್ಕೆ,ಕಚೇರಿಯಿಂದ ಕಚೇರಿಗೆ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ, ದೇಶದಿಂದ ದೇಶಕ್ಕೆ ಬೇರೆಬೇರೆಯಾಗಿರುವುದು ಕಂಡುಬರುತ್ತದೆ.ದುಡಿವಮಹಿಳೆ ಪುರುಷ ಸಹೋದ್ಯೋಗಿಗಳೊಡನೆ , ಪುರುಷ ಗ್ರಾಹಕರೊಡನೆ ಕಾರ್ಯನಿರ್ವಹಿಸುವ, ವ್ಯವಹರಿಸುವ ಅಗತ್ಯವಿರುವುದರಿಂದ ಅವಳಿಗೆ ವಿಶೇಷ ವಸ್ತ್ರಸಂಹಿತೆ ರೂಪಿಸಲಾಗಿರುತ್ತದೆ, ಬಹಳಷ್ಟು ವೃತ್ತಿ ಗಳಲ್ಲಿ ವಿಶೇಷ ಸಮವಸ್ತ್ರವನ್ನು ಪುರುಷರಿಗೂ ಮಹಿಳೆಯರಿಗೂ ಕಡ್ದಾಯಗೊಳಿಸಲಾಗಿರುತ್ತದೆ, ಉದಾಹರಣೆಗೆ-ನರ್ಸ್,ಡಾಕ್ಟರ್,ಏರ್ ಹೋಸ್ಟೆಸ್,ಪೈಲೆಟ್,ಪೋಲೀಸ್,ಇತ್ಯಾದಿ.ಕೆಲವು ಫ್ಯಾಕ್ಟರಿಗಳಲ್ಲೂ ಸಮವಸ್ತ್ರ ಸಂಹಿತೆ ಇರುತ್ತೆ.ಆದರೆ ಇನ್ನಿತರ ವೃತ್ತಿಗಳನ್ನು ಮಾಡುವ ಕಾರ್ಯ ಕ್ಷೇತ್ರಗಳಲ್ಲಿ ಸಮವಸ್ತ್ರವಿಲ್ಲದಿದ್ದರೂ ಒಂದುರೀತಿಯ ಅಘೋಷಿತ ವಸ್ತ್ರ ಸಂಹಿತೆ ಇದ್ದೇಇರುತ್ತೆ, ಅದು ದುಡಿಯುವವರ ವಿವೇಚನೆಗೂ ಸಂಬಂಧಪಟ್ಟದ್ದಾಗಿರುತ್ತೆ.ಕಂಪೆನಿಗಳಲ್ಲಿ ಜೀನ್ಸ್, ಟೀಶರ್ಟ್,ಮಿನಿ, ಮಿಡಿ ಧರಿಸಬಾರದು ಎಂಬ ವಿಧಿ ವಿಧಿಸಲಾಗಿರುತ್ತೆ.ನಮ್ಮ ದೇಶದಲ್ಲಿಮಹಿಳಾ ಬಸ್ ಕಂಡಕ್ಟರ್, ಮಹಿಳಾ ಪೋಲೀಸ್ ಇವರಿಗೆ ಖಾಕಿ ಪ್ಯಾಂಟ್ ಶರ್ಟ್ ಧರಿಸಬೇಕೆಂಬ ನಿಯಮಕ್ಕೆ ಕೆಲವರಿಗೆ ಇದು ಕಷ್ಟ ಹಾಗೂ ಇರಿಸುಮುರಿಸಾಗುವುದೆಂಬ ಕಾರಣಕ್ಕೆ ಅದೇ ಬಣ್ಣದ ಸೀರೆ,ಚೂಡಿದಾರ್ ಅನ್ನು ಧರಿಸಲು ಅನುವು ಮಾಡಿಕೊಡಲಾಗಿದೆ. ಇನ್ನು ಶಿಕ್ಷಕಿಯರಿಗೆ ಸಮವಸ್ತ್ರವಿಲ್ಲದಿದ್ದರೂ,ಸೀರೆ ಧರಿಸಬೇಕೆಂಬುದು ಒಂದು ಅಘೋಷಿತ ನಿಯಮ.ಖಾಸಗಿ ಶಾಲೆ, ಕಾಲೇಜುಗಳಲ್ಲಿ ಅದೇನಿಲ್ಲ.ಶಿಕ್ಷಕಿಯರು ಇತರೇ ಉದುಪು ಧರಿಸಿ ಬಂದರೆ ಮಕ್ಕಳಿಗೂ ಅವರಿಗೂ ಯಾವವ್ಯತ್ಯಾಸವಿಲ್ಲದೇ ಮಕ್ಕಳು ಅವರಿಗೆ ಗೌರವ ತೋರುವುದಿಲ್ಲ ಎಂಬ ಕಾರಣ ನೀಡಲಾಗುತ್ತದೆ.ಆದರೆ ಕೆಲವು ಖಾಸಗಿ ಕಾಲೇಜುಗಳಲ್ಲಿ ಶಿಕ್ಷಕಿಯರು ಚೂಡಿದಾರ್, ಪ್ಯಾಂಟ್ ಶರ್ಟ್ ತೊಟ್ಟು ಬಂದು ಪಾಠ ಮಾಡುತ್ತಾರಾದರೂ ವಿದ್ಯಾರ್ಥಿಗಳು ಅವರಿಗೆ ಅಗೌರವ ತೋರಿಸಿದ್ದನ್ನು ಕಂಡಿಲ್ಲ.ಶಿಕ್ಶಕಿಯರ ಉಡುಪು ಯಾವುದೇ ಇರಲಿ ಮೈಮುಚ್ಚುವಂತೆ ಇದ್ದು ಅಸಭ್ಯವಾಗಿಲ್ಲದಿದ್ದರೆ ಸರಿ. ಸೀರೆಯನ್ನೇ ಸೊಂಟ,ಹೊಟ್ಟೆ ಹೊಕ್ಕಳು,ಅರ್ಧ ಎದೆಯ ಭಾಗ ಎಲ್ಲ ಕಾಣುವಂತೆ ಉಟ್ಟು, ಡೀಪ್ ನೆಕ್ ಲೈನ್ ಇರುವ ರವಿಕೆತೊಟ್ಟು ಬರುವ ಕೆಲವು ಶಿಕ್ಷಕಿಯರು ,ಪ್ಲಾಟ್ ಫಾರ್ಮ್ ಮೇಲೆ ನಿಂತು ಪಾಠ ಹೇಳುವ ಬೋರ್ಡ್ ನಲ್ಲಿ ಬರೆಯುವ ಕಾರ್ಯ ಮಾಡುವಾಗ ನೋಡುವ ಮಕ್ಕಳಿಗೂ ಮುಜುಗರ ಉಂಟಾಗುತ್ತದೆ,ಹಾಗೆಂದು ಮೈತುಂಬಾ ಸೆರಗು ಸುತ್ತಿಕೊಂಡು ಪಾಠ, ಬರವಣಿಗೆ ಮಾಡುವುದೂ ಆಗದು, ಅತಿ ಸೆಕ್ಸಿ ಉಡುಪೆನ್ನಿಸಿರುವ ಸೀರೆಗಿಂತ ಚೂಡಿದಾರ್ ತುಂಬಾ ಕಂಫರ್ಟಬಲ್, ಮತ್ತು ಮೈ ಅನ್ನು ಮುಚ್ಚುವ ಉಡುಪು, ಶಿಕ್ಷಕಿಯರಿಗೆ ಮಾದರಿ ಉಡುಪು ಎನ್ನಬಹುದು,ಸೀರೆ ಉಟ್ಟು ಶಾಲಾಕಾಲೇಜುಗಳಲ್ಲಿ ಪಾಠ ಹೇಳುವಾಗ ನೂರಾರು ಮಕ್ಕಳ ಕಣ್ಣುಗಳು ಶಿಕ್ಷಕರತ್ತಲೇನೆಟ್ಟಿರುತ್ತದೆ,ಅಂತಹ ಸಂದರ್ಭಗಳಲ್ಲಿ ತಿಳಿಯದೇಸೆರಗು ಸರಿಯುವುದೋ, ಧರಿಸಿದ ಒಳ ಉಡುಪಿನ ಪಟ್ಟಿ ರವಿಕೆಯ ಹೊರಗೆ ಇಣುಕುವುದೋ,ತೆಳ್ಳನೆಯ ರವಿಕೆಯ ಸೀರೆಯ ಬಣ್ಣ ಕ್ಕೆ ಹೊಂದದ ಒಳ ಉಡುಪು ಎದ್ದು ಕಾಣುತ್ತಲೋ ಹೀಗೇನಾದರೂ ಅಧ್ವಾನಗಳು ಆದಾಗ ಅದು ಅತಿಯದ ಮುಜುಗರದ ಕ್ಷಣ-ಮಕ್ಕಳಿಗೂ-ಶಿಕ್ಷಕಿಯರಿಗೂಕೆಲವುಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯರಿಗೆ ಸೀರೆ, ಅಥವಾ ಚೂಡಿದಾರ್ ಮೇಲೆ ಒಂದು ಸಮಾನ ಬಣ್ಣದ ಕೋಟ್ ಹಾಕುವುದನ್ನು ಕಡ್ಡಾಯ ಮಾಡಲಾಗಿರುತ್ತದೆ, ಇದೂ ಸಹ ಉತ್ತಮವಾದುದು. ದುಡಿವ ಮಹಿಳೆಗೆ ಸಮವಸ್ತ್ರವಿಲ್ಲದಿದ್ದರೂ ಆಕೆ ಧರಿಸುವ ವಸ್ತ್ರಗಳಬಗ್ಗೆ ಈ ಕೆಳಕಂಡ ಕಾಳಜಿ ಅತ್ಯಗತ್ಯ ೧-ಧರಿಸುವ ವಸ್ತ್ರ ಶುಭ್ರವಾಗಿದ್ದು,ಚೆನ್ನಾಗಿ ಐರನ್ ಮಾಡಿರಬೇಕು. ೨-ಧರಿಸುವ ವಸ್ತ್ರ ಸಭ್ಯತೆಯ ಎಲ್ಲೆಯನ್ನು ಮೀರದಂತೆ ಮೈ ಮುಚ್ಚುವಂತಿರಬೇಕು, ೩-ಧರಿಸಿದ ವಸ್ತ್ರ ಅತೀ ಬಿಗಿ ಇಲ್ಲ ಅತೀ ಸಡಿಲವಾಗಿಯೂ ಇರಬಾರದು. ೪-ಧರಿಸುವ ಉಡುಪು ಅತೀ ತೆಳ್ಳಗೆ ಇಲ್ಲವೇ ಅತೀ ದಪ್ಪವಾಗಿರಬಾರದು.ಬೇಸಗೆ ಚಳಿ, ಮಳೆಗಾಲಕ್ಕೆ ಅನುಗುಣವಾದ ಬಟ್ಟೆ ಅಗಿರಬೇಕು,ಕಂಫರ್ಟಬಲ್ ಅಗಿರಬೇಕು. ೫-ಧರಿಸುವ ಉಡುಪಿನ ಒಳಗೆ ಧರಿಸುವ ಒಳ ಉಡುಪುಗಳು, ಉಡುಪಿನ ಬಣ್ಣದ್ದೇ ಆಗಿದ್ದರೆ ಒಳಿತು. ಉತ್ತಮ, ಯೋಗ್ಯ ಉಡುಪು ಧರಿಸುವುದರಜೊತೆಗೆ ನಗೆಮೊಗ, ಮೆಲುಮಾತು,ಚುರುಕು ಕಾರ್ಯ ನಿರ್ವಹಣೆ ಇವೆಲ್ಲ ವೃತ್ತಿಯ ಯಶಸ್ಸಿಗೆ ಕಾರಣವಾಗುತ್ತದೆ.ಜೊತೆಗೆ ಪ್ರಾಮಾಣಿಕತೆ,ಪಾರದರ್ಶಕತೆ, ಬಧ್ಧತೆಗಳಂತೂ ಬೇಕೇ ಬೇಕು. ಉಡುಪಿನ ಜೊತೆಗೆ, ಧರಿಸುವ ಪಾದರಕ್ಷೆಗಳು,ಜಂಭದಚೀಲ,ಕೂದಲ ವಿನ್ಯಾಸ,ಆಭರಣಗಳು,ಕೊಡೆ,ಇವೆಲ್ಲವೂ ದುಡಿವ ಮಹಿಳೆಯ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ೧-ಪಾದರಕ್ಷೆಗಳು-ದುಡಿವ ಮಹಿಳೆ ವರ್ಷದ ಎಲ್ಲಾ ಕಾಲದಲ್ಲಿಯೂ ಹೊರಗೆ ಹೋಗಬೇಕು, ಓಡಾಡಬೇಕು, ಅದರಿಂದ ಕಾಲಕ್ಕೆ ತಕ್ಕಂತಹ, ಕಾಲಿಗೆ ಸರಿಯಾಗಿ ಹೊಂದುವಂತಹ,ಕಂಫರ್ಟಬಲ್ ಆಗಿರುವ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಉಪಯೋಗಿಸಬೇಕು, ಇದರಲ್ಲಿ ಏರುಪೇರಾದರೆ ದುಡಿವ ಮಹಿಳೆ ತೀವ್ರವಾದ ಕಾಲುನೋವು ಮಂಡಿನೋವು, ಬೆನ್ನುನೋವುಗಳಿಂದ ಬಳಲಬೇಕಾಗುತ್ತದೆ.ಬಾರ್ ಕಿತ್ತುಹೋದ,ಹೀಲ್ ಸಡಿಲಗೊಂಡ ಚಪ್ಪಲಿಗಳಿಗೆ ಪಿನ್ ತೂರಿಸಿ ಇರಲಿ ಹೇಗೋ ಆಡ್ಜಸ್ಟ್ ಮಾಡುವಾ ಎಂದು ಹಾಕಿಕೊಂಡು ಹೊರಟರೆ, ಬರ್ ಕಿತ್ತುಹೋಗಿ, ಇಲ್ಲವೇ ಪಿನ್ ಕಾಲಿಗೆ ಚುಚ್ಚಿ ಅನುಭವಿಸಬೇಕದ ಫಜೀತಿ ಅಷ್ಟಿಷ್ಟಲ್ಲ.ದುಡಿವ ಮಹಿಳೆ ಸಾಧ್ಯವಾದಷ್ಟೂ ಫ್ಲಾಟ್ ಹೀಲ್ ಇರುವ ಪಾದರಕ್ಶೆಗಳನ್ನೇ ಬಳಸುವುದು ಸುರಕ್ಷೆ, ಫ್ಯಾಷನ್ ಎಂದು ಹೈ ಹೀಲ್ಡ್ ಧರಿಸಿ ಅವಸರದಲ್ಲಿ ಗಡಿಬಿಡಿಯಿಂದ ಸಾಗುವಾಗ ಎಡವಿ ಬಿದ್ದು ಕೈಕಾಲು ಮುರಿದುಕೊಳ್ಳಬೇಕಾದೀತು, ಇಲ್ಲವೇ ಹಿಮ್ಮಡಿ, ಮೀನಖಂಡಗಳ ನೋವಿನಿಂದ ಜೀವನವಿಡೀ ನರಳಬೇಕಾದೀತು. ೨-ವ್ಯಾನಿಟಿ ಬ್ಯಾಗ್ -ಅಥವಾ ಜಂಭದ ಚೀಲ ಇದು ದುಡಿವ ಮಹಿಳೆಯ ಒಂದು ಅವಿಭಾಜ್ಯ ಅಂಗ.ಮಹಿಳೆಯ ಅಗತ್ಯಗಳು ಮಹಿಳೆಗೇ ಮಾತ್ರ ಅರ್ಥವಾಗುವಂಥಹವು.ಮನೆಯಿಂದ ಹಲವರು ಘಂಟೆಗಳ ಕಾಲ ಹೊರಗಿರುವ ಮಹಿಳೆಗೆ ತುರ್ತು ಸಮಯದಲ್ಲಿ ಬೇಕಾಗುವ ಎಲ್ಲಾ ವಸ್ತುಗಳಿಗೂ ಅತ್ಯಂತ ಸೂಕ್ತವಾದ ಸಂಗ್ರಹ ತಾಣ ಈ ವ್ಯಾನಿಟಿ ಬ್ಯಾಗ್.ಪೆನ್,ಐಡಿ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಚೆಕ್ ಪುಸ್ತಕ,ಕರ್ಚೀಫ್,ಕಂಫಿಟ್ ಪ್ಯಾಕ್,ಮೇಕಪ್ ವಸ್ತುಗಳು{ಪೌಡರ್,ಲಿಪ್ಸ್ಟಿಕ್ ಇತ್ಯಾದಿ),ಮಳೆಗಾಲದಲ್ಲಿ ಧರಿಸಿದ ಬಟ್ಟೆ ಒದ್ದೆಯಾದರೆ ಬದಲಿಸಲೊಂದು ಸೆಟ್ ಬಟ್ಟೆ, ಹಣ,ಟಿಫನ್ ಬಾಕ್ಸ್, ಮೊಬೈಲ್ ಹೀಗೆ ಏನೆಲ್ಲವನ್ನೂ ತನ್ನೊಡಲಲ್ಲಿ ಇಟ್ಟುಕೊಳ್ಳುವ ವ್ಯಾನಿಟಿ ಬ್ಯಾಗ್ ದುಡಿವ ಮಹಿಳೆಯ ಅತ್ಯಂತ ಆಪ್ತ ಸಂಗಾತಿ. ಎಡೆಬಿಡದೆ ಆಕೆಯ ಹೆಗಲಿಗೆ ಅಂಟಿಕೊಂಡೇ ಇರುವ ಪ್ರಿಯ ಗೆಳತಿ.ವ್ಯಾನಿಟಿಬ್ಯಾಗ್ ದೊಡ್ಡದಾಗಿದ್ದು, ಹಲವು ಕಂಪಾರ್ಟ್ಮೆಂಟ್ ಗಳನ್ನು ಹೊಂದಿದ್ದು, ಅದರ ಹೆಗಲ ಪಟ್ಟಿ, ಜಿಪ್ ಗಳು ಗಟ್ಟಿಮುಟ್ಟಾಗಿರಬೇಕಾದುದು ಅತ್ಯಗತ್ಯ,ಚೀಪ್ ಆಗಿ ಸಿಗುತ್ತೆ ಎಂದು ಅಗ್ಗದ ಬ್ಯಾಗ್ ಖರೀದಿಸಿ ಕಿತ್ತುಜೋಲಾಡುವ ಹೆಗಲಪಟ್ಟಿ,ಜಿಪ್ ಹಾಳಾಗಿ ವಿಕರಾಳವಾಗಿ ಬಾಯ್ತೆರೆದ ಬ್ಯಾಗಿನಿಂದ ಮುಜುಗರ ಅನುಭವಿಸುವುದಕ್ಕಿಂತ ಉತ್ತಮ ಗುಣಮಟ್ಟದ ದೊಡ್ದ ಬ್ಯಾಗ್ ಖರೀದಿಸಿದರೆ ಒಳ್ಳೆಯದು. ೩-ಆಭರಣಗಳು- ಮಹಿಳಾ ನರ್ಸ್, ಡಾಕ್ಟರ್ ಗಳಿಗೆ ಹೂವು ಮುಡಿಯುವುದು,ಬಳೆತೊಡುವುದು, ಸುಗಂಧ ದ್ರವ್ಯ ಬಳಸುವುದು,ಆಭರಣಗಳನ್ನು ತೊಡುವುದನ್ನು ನಿಷೇಧಿಸಲಾಗಿರುತ್ತೆ.ಅದರಿಂದ ರೋಗಿಗಳಿಗೆ ಕಿರಿಕಿರಿಯಾಗಬಹುದು, ರೋಗಿಗಳನ್ನು ಉಪಚರಿಸಲು ಅಡ್ಡಿಯಾಗಬಹುದು ಎಂಬುದು ಕಾರಣ, ಉಳಿದಂತೆ ದುಡಿವ ಮಹಿಳೆಯರು ಹೊರಗೆ , ವಾಹನಗಳಲ್ಲಿ ಓಡಾಡುವವರಾದ್ದರಿಂದ ಸಾಧ್ಯವಾದಷ್ಟೂ ಕಡಿಮೆ ಆಭರಣ, ಕಡಿಮೆ ಚಿನ್ನ ಧರಿಸುವುದು ಸುರಕ್ಷಿತ,ಟೇಬಲ್ ವರ್ಕ್ ಮಾಡುವ ಮಹಿಳೆಯರು ಕೈತುಂಬಾ ಬಳೆ ಧರಿಸಿದರೆ ಕೆಲಸ ಮಾಡುವುದಾದರೂ ಹೇಗೆ?ಘಲ್ ಘಲ್ ಎಂದು ಶಬ್ದಿಸುವ ಗೆಜ್ಜೆ ಧರಿಸಿ ಬರುತ್ತಿದ್ದ ಶಿಕ್ಷಕಿಯೋರ್ವರ ಬಗ್ಗೆ ಮಕ್ಕಳು ಮೋಹಿನಿ ಅಂತ ಆಡಿಕೊಳ್ಳುತ್ತಿದ್ದುದು, ಹೆಸರಿಟ್ಟಿದ್ದು ತಮಾಷಿಯಾಗಿತ್ತು, ೪-ಕೇಶವಿನ್ಯಾಸ- ನರ್ಸ್, ಏರ್ ಹೋಸ್ಟೆಸ್ ಮೊದಲಾದವರಿಗೆ ಕೂದಲನ್ನು ಉದ್ದಕ್ಕೆ ಬಿಡದೆ ನಿರ್ದಿಷ್ಟ ರೀತಿಯಲ್ಲಿ ಗಂಟುಕಟ್ಟಿಕೊಳ್ಳಬೇಕಿರುತ್ತದೆ.ಉಳಿದಂತೆ ಬೇರೆಲ್ಲಾ ವೃತ್ತಿಗಳಲ್ಲಿರುವವರು ಜಡೆ ಹೆಣೆದುಕೊಳ್ಳುವುದು,ವಿವಿಧರೀತಿಯಲ್ಲಿ ಗಂಟುಹಾಕಿಕೊಳ್ಳುವುದು, ಪೋನಿಟೈಲ್ ಕಟ್ಟುವುದು ಇದೆ.ಉದ್ದಜಡೆಯ ನಿರ್ವಹಣೆ ದುಡಿವಮಹಿಳೆಯರಿಗೆ ಕಷ್ಟವಾಗುವುದರಿಂದ ಕೂದಲನ್ನು ಗಿಡ್ದವಾಗಿ ಕತ್ತರಿಸಿಕೊಳ್ಳುವುದೂ ಸಾಮಾನ್ಯ.ವಿನ್ಯಾಸ ಯಾವುದೇ ಇದ್ದರೂ ಕೂದಲನ್ನು ಕೆದರಿಡದೇ ಒಪ್ಪವಾಗಿ ಬಾಚಿ ಇರಿಸುವುದು ಮುಖ್ಯ,ಸಾಮಾನ್ಯ ವರ್ಕಿಂಗ್ ದಿನಗಳಲ್ಲಿ ಸರಳ ಕೇಶವಿನ್ಯಾಸವೇ ಸಾಕು.ಕೆಲಸಕ್ಕೆ ಹೊರಡುವ ಮೊದಲು ತಲೆ ಸ್ನಾನ ಮಾಡಿ ಕೂದಲು ಸರಿಯಾಗಿ ಒಣಗಿಸಲು ಪುರುಸೊತ್ತು ಇಲ್ಲದೆ ಹಾಗೆಯೇ ಕಟ್ಟಿಕೊಂಡು ಕೆಲಸಕ್ಕೆ ಹೋಗುವುದರಿಂದ ಅನೇಕ ಖಾಯಿಲೆಗಳಿಗೆ ಕಾರಣವಾಗುತ್ತದೆ,ತಲೆಗೆ ಎಣ್ನೆ ಸ್ನಾನವನ್ನು ವಾರದ ರಜಾದಿನದಂದು ವಿರಾಮವಾಗಿ ಮಾಡುವ ಅಭ್ಯಾಸ ಒಳಿತು. ೫-ಕೊಡೆ- ದುಡಿವ ಮಹಿಳೆಯ ಕೈಯಲ್ಲಿ ಕೊಡೆ ಸಹ ಸಾಮಾನ್ಯವಾಗಿ ಕಾಣುವ ವಸ್ತು,ಬಿಸಿಲು ಮಳೆಯಿಂದ ರಕ್ಷಿಸಿಕೊಳ್ಳಲು ಅವಳಿಗೆ ಕೊಡೆ ಬೇಕೇ ಬೇಕು. ಕೆಲವರು ಅದೊಂದು ಭಾರ ಯಾಕೆ ಎಂದು ಕೊಡೆಯಿಲ್ಲದೆಯೇ ಓಡಾಡಿ ಮುಖ ಸುಟ್ಟ ಬದನೆಕಾಯಿಯಂತೆ ಮಾಡಿಕೊಂಡಿರುತ್ತಾರೆ.ಕೊಡೆ ಕೈಯಲ್ಲಿದ್ದರೆ ಬಿಸಿಲು ಮಳೆಯಿಂದ ರಕ್ಷಣೆ ಮಾತ್ರವಲ್ಲದೆ, ಒಂದು ಆಯುಧವೇ ಕೈಯಲ್ಲಿದ್ದಂತೆ.ಬಿಸಿಲಿನ ತಾಪಕ್ಕೆ ಆಯಾಸ , ತಲೆತಿರುಗು ಉಂಟಾಗಿ ಕಚೇರಿ ಕೆಲಸ ಮಾಡಲಾಗದೇ ಹೋಗಬಹುದು, ಒದ್ದೆಯಾದರೆ ಶೀತ ಜ್ವರದಿಂದ ನರಳಿ ಕಚೇರಿಗೆ ರಜೆ ಮಾಡಬೇಕಾದ ಪ್ರಸಂಗ ಬರಬಹುದು, ಆದ್ದರಿಂದ ದುಡಿಯುವ ಮಹಿಳೆಯ ಕೈಗೆ ಕೊಡೆಯೂ ಒಂದು ಶೋಭೆ. ೬-ಲಂಚ್ ಬಾಕ್ಸ್- ಹೆಚ್ಚಾಗಿ ದುಡಿವ ಮಹಿಳೆಯರೆಲ್ಲರ ಮತ್ತೊಂದು ಬೆಂಬಿಡದ ಸಂಗಾತಿ ಟಿಫನ್ ಬಾಕ್ಸ್/ ಲಂಚ್ ಬಾಕ್ಸ್ ಅಥವಾ ಊಟದ ಡಬ್ಬಿ. ಬೆಳಗಿನ ಅವಸರದಲ್ಲಿ ಮಾಡಿಟ್ಟ ತಿಂಡಿ ತಿನ್ನಲೂ ದುಡಿವ ಮಹಿಳೆಗೆ ಪುರುಸೊತ್ತು ಇರುವುದಿಲ್ಲ.ಅಥವಾ ಅವಸರದಲ್ಲಿ ಒಂದೆರಡು ತುತ್ತು ನುಂಗಿ ಮಧ್ಯಾಹ್ನಕ್ಕೆಂದು ಡಬ್ಬಿಯಲ್ಲಿ ಅದೇ ಬೆಳಗಿನ ತಿಂಡಿಯನ್ನೋ, ಇಲ್ಲ ಅನ್ನ ಚಿತ್ರಾನ್ನವೋ, ಬ್ರೆಡ್ಡೋ ಏನೋ ಒಂದನ್ನು ತುಂಬಿಸಿಕೊಂಡು ಬ್ಯಾಗ್ನಲ್ಲಿ ಇಟ್ಟುಕೊಂಡು ಹೊರಟುಬಿಡುತ್ತಾಳೆ.ಕಚೇರಿಯಲ್ಲಿ ಮಧ್ಯಾಹ್ನದವರೆಗೆ ಕೆಲಸ ಮಾಡಿದವಳಿಗೆ ಲಂಚ್ ಬ್ರೇಕ್ ಗೆ ಮುನ್ನವೇ ಹೊಟ್ಟೆ ಚುರುಗುಡತೊಡಗುತ್ತೆ. ಲಂಚ್ ಬ್ರೇಕ್ ನಲ್ಲಿ ಬಾಕ್ಸ್ ತೆರೆದು ತಿನ್ನಲಿಟ್ತರೆ ಅದು ತಣಿದು, ಇಲ್ಲವೇ ಗಟ್ಟಿಯಾಗಿ ಗಂಟಲಲ್ಲೇ ಇಳಿಯಲಾರದು, ನಿಮ್ಮ ಲಂಚ್ ಅನ್ನು ಗಂಟೆಗಟ್ಟಲೆ ತಾಜಾ ಆಗಿಡುತ್ತೆ ಎಂದು ಎಷ್ಟೆಲ್ಲ ಜಾಹೀರಾತು ನೀಡಿದರೂ ೫-೬ ಗಂಟೆಗಳ ಕಾಲ ನಮ್ಮ ಆಹಾರವನ್ನು ತಾಜಾ, ಮತ್ತು ಬಿಸಿಯಾಗಿಡುವ ಯಾವುದೇ ಲಂಚ್ ಬಾಕ್ಸ್ ಇಲ್ಲವೇ ಇಲ್ಲ.ಒಮ್ಮೊಮ್ಮೆ ಅದನ್ನು ತಿನ್ನಲಾಗದೆ ಹಾಗೇ ಬಿಡುವುದಾದರೂ,ಮತ್ತೆ ವಿಧಿಯಿಲ್ಲದೆ ಅದನ್ನೇ ನುಂಗಿ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ,ಕೆಲವೊಮ್ಮೆ ಕಚೇರಿ ಸಹೋದ್ಯೋಗಿಗಳೊಡನೆ ಬಾಕ್ಸ್ ಹಂಚಿಕೊಳ್ಳುತ್ತಾ ತಮಾಷೆಯ ಮಾತುಗಳನ್ನಾಡುತ್ತಾ ತಿನ್ನುವುದು ಖುಶಿ ಕೊಡುತ್ತದೆ. ಲಂಚ್ ಬಾಕ್ಸ್ ಸಹೋದ್ಯೋಗಿಗಳೊಡನೆ ಉತ್ತಮ ಬಾಂಧವ್ಯ ಬೆಸೆಯುವ ಕೊಂಡಿಯೂ ಆಗುತ್ತದೆ.ಲಂಚ್ ಬಾಕ್ಸ್ ತರಲು ಸೋಮರಿತನಪಟ್ಟು ಕ್ಯಾಂಟೀನ್, ಹೋಟೆಲ್ ಮೊರೆಹೊಗುವುದು ದುಬಾರಿ ಮಾತ್ರ್ವಲ್ಲ ,ಅನಾರೋಗ್ಯಕರವೂ ಹೌದು. RESHMA A S Personality can be assessed by what you wear says many, But it is also said that it is foolishness to evoluate a person from his dress.Both are in a way true to some extent.At home we can wear what we like, but when we go outside, and work for the whole day we have to follow certain dresscode,and be presentable.Usually there will be dresscode for both working men and women which differs from job to job, industry to industry, office to office, nation to nation. Working women have to work along with men and other women,and interact with many consumers.So according to the demands of work environment, traditions,comfort, special dresscode for working women are enforced everywhere, some directly, and some indirectly.for some professions there is special strict dresscode -uniforms-for example-Nurses-doctors-airhostesses-drivers-conductors- As for other professions though there is no uniform dresscode there will be hidden dresscode which the women workers are expected to follow- for example lady teachers are expected to wear saris only.It is believed that if a lady teacher or lecturer wears dresses other than sari, the students do not respect them.But i hv seen lady lecturers/ teachers of some private colleges and schools wearing mod dresses, and are never disrespected by their students,Actually sari is the sexyiest dress which reveals body line, and is not very comfortable, and makes one very concious.Chudidar or punjabi dress is the best and comfortable dress which covers most of the body and helps easy/ free movements .Wearing a coat on the dress/ sari is also acceptable.In Arab countries strict traditional dresscode for women is introduced. Wearing reveaing or indecent clothes is punishable in those countries., The common things working women have to follow about there dress are as follows- 1-Dress in a decent way 2-stay neat always 3-Maintain dignity of your work place and your personality 4-If work in a fashion environment,do dress that suits the environment, 5-Do not wear very tight/ very loose dresses, wear comfortable dress. 6-Do nor wear transparent , deep neckline dresses 7-wear proper undergarments, either skincolored or of the same colors of your dress. 8-Dress, so that you look smart, presentable,comfortable, decent. Aworking womans weapons are 1-vanity bag-2-footwear. 3-umbrella, 4-tiffenbox.These things play very importnt roles in a working womans life, 1-VANITY BAG Avanity bag is the essential inseperable, important thing which is always seen hanging from a working womans shoulder.Aworking woman keeps pen, kerchief,makeup materials,tiffen box,folding umbrella, waterbottle,medicines like headache, cold, caugh tablets,kamphit spare packet,comb, money--ohhh the list goes on-in her vanity bag.It serves as the saviour in need to her.Avanity bag should be big,with many compartments, strong shoulder straps and good quality jips and inner linings.Some go for cheap rates and after buying cheap bags suffer a lot with cut down straps,holes in the inner linings, jips those cannot be pulled and shut.So it is always better to buy quality bags. 2 FOOTWEAR Aworking woman must choose flat heeled, soft and good quality slippers which also fits well and is comfortable.Cheaper slippers will give lot of troubles.high heeled slippers,unsized slippers,will make her suffer from swelling, pain in feet, joint pain, and also backpain.Some times she may stumble and fall,which leaves her injured,bonr fractured. 3-UMBRELLA- To get protection from heat, and rain wrking woman who sometimes need to walk a lot outside, needs umbrella.This too should be of good quality.Some think that carrying an umbrella is a burden, and often get sun burnt, wet in rain,which leads to many cold related discesses,and dakens the face, arms,back, and she also suffers fatigue.These may affect her work standards too.An umbrella in hand can be used as a weapon too . 4-Tiffen box- Tiffen box is also an essential thing a working woman cannot part with.A working woman usually will not be able to have her breakfast in the morning due to all busy preparetions, So she fills her lunch box and carries with her.In her office when she gets leisure,she opens her lunchbox and eats the food that has become cold,stiffened,There is no lunch box which keeps your food warm and fresh, even if advertisements about lunch/ tiffen boxes say a lot.Some times she cannot eat the cold, stiffened food, but some times when she is tired, overworked, hungry, the same cold, stiffened food tastes good.Every day she cannot have food in canteen or hotels. it will be a costly affair.So she preffers to carry a lunch/tiffen box with her to office, Many working women during lunch break in ladiesroom share their foodies with their colleauges which helps strengthening the friendship and create a friendly atmosphere in the office. 5-JEWELS- It is better to avoid flashy jewelleries/gold jewelleries as it is always dangerous.Even do not display the gold mangalsutra , cover it inside your dress so that chain snatures do not take a chance.Nurses and Doctors are not allowed to wear flowers in hair, bangles, and perfumes as these may irritate, distract the patients and also these may act as obstacles in serving the patients. HAIR STYLE- In some professions like like nursing,airhostesses strict hairstyle code is introduced-hairs should be tied in to knots and hoods also should be fixed. As for other working women no such rules- they either plait their hair, let fall loose up to shoulders,tie in to a pony tail,tie in to knots. Some working women find it difficult to manage, care their long hair, so do they cut them in to short bob.What ever is your hairstyle,keep your hair clean, tidy, well combed.Do not take oil headbath on working days, if the washed hairs are not properly dried you will suffer with head ache, cold, fever, It is better to plan oil head baths on sundays, and holidays.Wednesday, 18 October 2017
14 Photos · Updated about a month ago ಯಾವ ಮೋಹನ ಮುರಳಿ ಸೆಳೆಯಿತು ದೂರ ದೇಶಕೆ ನಿನ್ನನು??? ಯಾವ ಮೋಹನ ಮುರಳಿ ಸೆಳೆಯಿತು ದೂರ ದೇಶಕೆ ನಿನ್ನನು??? ಯಾವ ಮೋಹನ ಮುರಳಿ ಸೆಳೆಯಿತು ದೂರ ದೇಶಕೆ ನಿನ್ನನು???
ಶಕೆ ನಿ
ನ್ನನು??
14 Photos · Updated about a month ago
ಯಾವ ಮೋಹನ ಮುರಳಿ ಸೆಳೆಯಿತು ದೂರ ದೇಶಕೆ ನಿನ್ನನು???
ಯಾವ ಮೋಹನ ಮುರಳಿ ಸೆಳೆಯಿತು ದೂರ ದೇಶಕೆ ನಿನ್ನನು???
ಯಾವ ಮೋಹನ ಮುರಳಿ ಸೆಳೆಯಿತು ದೂರ ದೇಶಕೆ ನಿನ್ನನು???
ನಮ್ಮ ಮಲೆನಾಡಿನ ಬಹಳಷ್ಟು ಹುಡುಗರು ವಿದೇಶಗಳಲ್ಲಿ ವಿವಿಧ ಉದ್ಯೋಗ ಮಾಡುತ್ತಾರೆ.ಕೆಲವರು ಉದ್ಯೋಗ ಮಾಡಲು ಹೋದವರು ಅಲ್ಲಿಯೇ ನೆಲೆಸಿರುವುದೂ ಇದೆ.ನಮ್ಮ ಮಲೆನಾಡಿನ ಬಹುತೇಕ ಜನರ ಜೀವನ ಮಟ್ಟ ಆರ್ಥಿಕ ಸ್ಥಿತಿಗತಿ ಹಿಂದಿಗಿಂತ ಬಹಳಷ್ಟು ಉತ್ತಮಗೊಂಡಿರುವುದರ ಹಿಂದೆ,ಬಹುಜನರ ಜೀವನ ಶೈಲಿ ,ಅಂತಸ್ತು ಬದಲಾಗಿರುವುದರ ಹಿಂದೆ,ಮಲೆನಾಡಿನ ಹಳೆಯ ವಿಶಿಷ್ಟ ಶೈಲಿಯ ಮನೆಗಳು ನೆಲಸಮವಾಗಿ ಅಲ್ಲಿ ಆಧುನಿಕವಾದ ಹೊಸ ಕಟ್ಟಡಗಳು ಎದ್ದು ನಿಂತಿರುವುದರ ಹಿಂದೆ ನಮ್ಮ ದೇಶದಿಂದ ವಿದೇಶಗಳಿಗೆ ಹೋಗಿ ಅಲ್ಲಿ ದುಡಿಯುವ ಯುವಕರ ಗಳಿಕೆಯ ಪಾತ್ರ ಮುಖ್ಯವಾಗಿದೆ,ನಮ್ಮೂರಲ್ಲೂ ನಮ್ಮೂರಿನ ಬಹಳಷ್ಟು ತರುಣರು ವಿದೇಶಗಳಲ್ಲಿ ದುಡಿಯುತ್ತಿದ್ದಾರೆ.ಅರಬ್ ದೇಶಗಳು,ಪಾಶ್ಚಿಮಾತ್ಯ ದೇಶಗಳಲ್ಲಿ ದುಡಿಯುತ್ತಾರೆ,ಹೀಗೆ ಹೊರದೇಶಗಳಲ್ಲಿ ದುಡಿಯುವವರು ಇಲ್ಲಿಯ ಎಲ್ಲಾ ಜನಾಂಗಕ್ಕೂ ಸೇರಿದವರಾಗಿದ್ದಾರೆಯಾದರೂ ಹೆಚ್ಚಿನ ಯುವಕರು ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಕ್ಕೆ ಸೇರಿದವರು.ಪ್ರತಿ ಬೀದಿಯಲ್ಲಿಯೂ ಇರುವ ಮನೆಗಳ ಪೈಕಿ ಅರ್ಧದಷ್ಟು ಮನೆಗಳಲ್ಲಿಮನೆಯ ಗಂಡುಮಕ್ಕಳು ವಿದೇಶಗಳಲ್ಲಿ ದುಡಿಯುವವರಿದ್ದಾರೆ. ವಿದೇಶಗಳಲ್ಲಿ ಉದ್ಯೋಗ ಮಾಡುವವರಲ್ಲೂ ಹಲವು ವಿಧಗಳಿವೆ,1 ಉನ್ನತ ವಿದ್ಯಾಭ್ಯಾಸಮತ್ತು ಉನ್ನತ ತಾಂತ್ರಿಕ ಶಿಕ್ಷಣ ಪಡೆದು ದೊಡ್ಡ ಕಂಪೆನಿಗಳಲ್ಲಿ ಉದ್ಯೋಗ ಪಡೆದು ಕಂಪೆನಿ ವತಿಯಿಂದಲೋ ಇಲ್ಲ ನೇರವಾಗಿಯೇ ವಿದೇಶಗಳ ಕಂಪೆನಿಗಳಲ್ಲಿ ಉದ್ಯೋಗ ಪಡೆದು ವಿದೇಶಗಳಲ್ಲಿ ದುಡಿಯುತ್ತಿರುವವರು,2ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿದ್ದರೂ ಇಲ್ಲಿ ಕೆಲವು ತರಬೇತಿ ಪಡೆದುಕೊಂಡು ನಂತರ ವಿದೇಶಗಳಲ್ಲಿ ಡ್ರೈವರ್,ಪೈಂಟರ್,ಸೇಲ್ಸ್ ಮ್ಯಾನ್, ಸೂಪರ್ವೈಸರ್, ಎಲೆಕ್ಟ್ರೀಶಿಯನ್ ,ಪ್ಲಂಬರ್,ಇತ್ಯಾದಿ ಕೆಲಸ ಮಾಡುವವರು.ನಮ್ಮೂರಲ್ಲಿಮೊದಲ ಕ್ಯಾಟಗರಿಯವರ ಸಂಖ್ಯೆ ಕಡಿಮೆ.ಎರಡನೆಯ ವರ್ಗಕ್ಕೆ ಸೇರಿದವರೇ ಹೆಚ್ಚು. ಮೊದಲು ಪಾಸ್ ಪೋರ್ಟ್ ಒಂದನ್ನು ಮಾಡಿಸಿಕೊಳ್ಳುವುದು-ನಂತರ ಅಲ್ಲಿಲ್ಲಿ ಕಷ್ಟಪಟ್ಟು ದುಡಿದು ಕೂಡಿಟ್ಟುಕೊಂಡ ಹಣವನ್ನೋ ಇಲ್ಲಸಾಲ ಮಾಡಿ ಪಡೆದ ಹಣವನ್ನೋ ಏಜೆಂಟ್ ಗಳಿಗೆ ತೆತ್ತುಅಂತೂ ಒಂದು ವೀಸ ಪಡೆದುಕೊಂಡಾಗ ಮನೆಯವರೆಲ್ಲರಿಗೆ ಇನ್ನು ಹರಿಯಿತು ನಮ್ಮ ಕಷ್ಟಗಳೆಲ್ಲ ದೇವರು ಕಣ್ಣು ಬಿಟ್ಟ ಎಂಬ ಹಿಗ್ಗು. ಒಮ್ಮೆ ಮನೆಯ ಮಗ ವಿದೇಶಕ್ಕೆ ಹೋದನೆಂದರೆ ಅಲ್ಲಿಂದ ತಿಂಗಳು ತಿಂಗಳೂ ಹಿಂದೆಂದೂ ಕಾಣದಿದ್ದಷ್ಟುದೊಡ್ಡ ಮೊತ್ತದ ಹಣ ಬರಲಾರಂಭವಾಗುತ್ತದೆ, ಮೊದಲು ಇಲ್ಲಿನ ಸಾಲವೆಲ್ಲ ತೀರುತ್ತದೆ, ನಂತರ ತಾಯಿ ಅಕ್ಕತಂಗಿಯರ ಕಿವಿ, ಕೊರಳು ಕೈಗೆಲ್ಲ ಬಂಗಾರ ಬರುತ್ತದೆ, ಉಡಲು ಫಾರಿನ್ ಬಟ್ಟೆ-ಫಾರಿನ್ ವಾಚು, ದೊಡ್ಡ ಮೊಬೈಲು-ಮನೆಗೆ ಟಿವಿ ಫ್ರಿಜ್ಜು-ಇತ್ಯಾದಿ-ಇತ್ಯಾದಿ-ಮುಂದಿನದ್ದೇ ಸ್ವಂತ ಚಂದದ ಮನೆ ಕಟ್ಟಿಕೊಳ್ಳುವುದು--ಅದಕ್ಕೂ ಮೊದಲು ಮದುವೆಯಾಗದಿರುವ ಅಕ್ಕ ತಂಗಿಯರಿಗೆಲ್ಲ ಮದುವೆಗೆಹಣ ಹೊಂದಿಕೆ ಆಗುತ್ತದೆ---ಇವೆಲ್ಲ ಮೊದಲ ಹಂತಗಳು- ಮನೆಯವರ ಸಾಲ ಸೋಲ ನೀಗಿಸುವುದು-ಮನೆಯ ಹೆಣ್ಣುಮಕ್ಕಳಿಗೆ ಬಂಗಾರ ತರುವುದು-ಅಕ್ಕ ತಂಗಿಯರ ಮದುವೆ ಮಾಡುವುದು-ಸ್ವಂತಕ್ಕೊಂದು ಚಂದದ ಮನೆ ಕಟ್ಟುವುದು-ಅಥವ ಇರುವ ಮನೆಯ ನವೀಕರಣ-ಆಧುನಿಕೀಕರಣ ಈ ಗುರಿ ಸಾಧನೆಗಳನ್ನು ತನ್ನ ಮೊದಲ ಆದ್ಯತೆಯನ್ನಗಿಸಿಕೊಂಡ ಹುಡುಗ ಅದಕ್ಕಾಗಿ ವಿದೇಶದಲ್ಲಿ ದುಡಿಯುತ್ತಾನೆ,ಅದೆಷ್ಟೋ ಕಷ್ಟಪಡುತ್ತಾನೆ ಅಲ್ಲಿ,ಇಲ್ಲಿ ಜೀವಮಾನವಿಡೀ ದುಡಿದರೂ ಗಳಿಸಲಾಗದಷ್ಟುಹಣ ಅಲ್ಲಿ ಕೆಲವು ವರ್ಷಗಳಲ್ಲಿಯೇ ಅವನ ಖಾತೆಯಲ್ಲಿ ಜಮೆಯಾಗಿರುತ್ತೆ. ಎರಡೋ ಮೂರೋ ವರ್ಷದ ನಂತರ ಎರಡು ಮೂರು ತಿಂಗಳ ರಜೆ ಪಡೆದು ಮನೆಗೆ ಬರುವಾಗಿನ ಸಂಭ್ರಮ ಹೇಳತೀರದು.ಇಲ್ಲಿಂದ ಹೋ್ಗುವಾಗ ಇದ್ದ ಹುಡುಗನ ಚಿತ್ರವೇ ಬದಲಾಗಿದೆ-ಮೊದಲಿಗಿಂತ ಗುಂಡಗೆ ಬೆಳ್ಳಗಾಗಿರುತ್ತಾನೆ. ಗರಿ ಗರಿ ಬಟ್ಟೆ- ತಂಪು ಕನ್ನಡಕ ದುಬಾರಿ ವಾಚು ಶೂಗಳು-ಮೇಲೆ ಮಾರುದೂರಕ್ಕೂ ಘಮಘಮಿಸುತ್ತಾ ಮೂಗಿಗೆ ಅಡರುವ ವಿದೇಶೀ ಸೆಂಟು-ಹಲವು ಸೂಟ್ ಕೇಸ್ ಗಳು- ನಡಿಗೆಯಲ್ಲಿ ಮಾತಿನಲ್ಲಿ ತುಂಬಿತುಳುಕುವ ಆತ್ಮ ವಿಶ್ವಾಸ-ಈ ಫಾರಿನ್ ರಿಟರ್ನ್ ಹುಡುಗನನ್ನು ಈಗ ಎಲ್ಲರೂ ಮಾತನಾಡಿಸುವವರೇ-ಇಲ್ಲೇ ಏನೋ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿದ್ದಾಗ ಸರಿಯಾಗಿ ತಿರುಗಿಯೂ ನೋಡದವರೂ ಸಹ ಈಗ ಅಪಾರ ವಿಶ್ವಾಸ ನಗು ಆದರ ಆತ್ಮೀಯತೆಯಿಂದ ಮಾತನಾಡಿಸುತ್ತಾಹತ್ತಿರ ಬರುತ್ತಾರೆ, ಸ್ನೇಹಿತರ ದಂಡೇ ಸುತ್ತುವರಿಯುತ್ತೆ,ಮದುವೆಗೆ ಬಂದ ಹೆಣ್ಣುಮಕ್ಕಳಿರುವವರ ದೃಷ್ಟಿ,ಚಿತ್ತ ಎಲ್ಲ ಇವರತ್ತ--ಈ ಆದರ ಈ ಗಮನ ಇವೆಲ್ಲ ಹುಡುಗನ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತವೆ.ಮನೆಯವರಿಗೂ ಹೆಮ್ಮೆ- ಹಿಗ್ಗು.ಬಂಧು ಬಾಂಧವರ ಭೇಟಿ-ಅವರಿಗೆಲ್ಲ ಫಾರಿನ್ ಉಡುಗೊರೆ ನೀಡುವುದು- ಸಂಭ್ರಮದ ಭೋಜನ ಕೂಟಗಳು- ತಿರುಗಾಟ ಇವುಗಳ ಮಧ್ಯೆ ರಜೆ ಕಳೆದುದೇ ತಿಳಿಯುವುದಿಲ್ಲ, ಮತ್ತೆ ವಿದೇಶಕ್ಕೆ ಪಯಣ-ಇನ್ನೊಮ್ಮೆ ಬಂದಾಗ- ಹುಡುಗಿ ನೋಡಿ ಮದುವೆ ಆಗುವುದು-ಮದುವೆಯಾಗಿ ತಿಂಗಳು ಎರಡು ತಿಂಗಳಲ್ಲಿ ನವವಧುವನ್ನು ಇಲ್ಲಿಯೇ ಬಿಟ್ಟು ವಾಪಸ್---ವಿದೇಶಕ್ಕೆ ಹಾರುವುದು ವಿದೇಶಗಳಲ್ಲಿ ಕೈತುಂಬ ಗಳಿಸುವ ತಮ್ಮ ಗಳಿಕೆಯಿಂದ ತಮ್ಮ ಕುಟುಂಬದವರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವ ಈತರುಣರು ತುಂಬಾಅದೃಷ್ಟವಂತರು ಸುಖಿಗಳು ಎಂದೇ ಎಲ್ಲರೂ ತಿಳಿ್ಯುತ್ತಾರೆ. ಆದರೆ ನಿಜಕ್ಕೂ ಇವರದ್ದು ಒಂದು ರೀತಿಯ ವನವಾಸವೇ.ಅವರು ಅಲ್ಲಿ ಪಡುವ ಕಷ್ಟಗಳು ಅವರಿಗೆ ಮಾತ್ರ ಗೊತ್ತು, ಎಲ್ಲರಿಗೂ ಕಾಣುವುದು ಅವರ ಭೌತಿಕ ಅಭಿವೃಧ್ಧಿ ಮಾತ್ರ, ಮದುವೆಗೆ ಮೊದಲು ಅಲ್ಲಿ ದೂರ ದೇಶದಲ್ಲಿ ಅಪರಿಚಿತರ ನಡುವೆ ಒಂಟಿ ಜೀವನ-ಅಲ್ಲಿನ ಪರಿಸರಕ್ಕೆ-ಕೆಲಸಕ್ಕೆ ಜೀವನ ಶೈಲಿಗೆ ಹೊಂದಿಕೊಳ್ಳುವಾಗಿನ ಕಷ್ಟಗಳು,ತನ್ನ ಗುರಿ್ಸಾಧಿಸಲು ಹಣ ಗಳಿಸುವ ಕೂಡಿಡುವ ಮನೆಗೆ ಕಳಿಸಿಕೊಡುವ ಧಾವಂತ ತಾಯಿ ತಂದೆ ಊರು ಮನೆ ಸೋದರರು ಎಲ್ಲರನ್ನು ಮಿಸ್ ಮಾಡಿಕೊಂಡು ಸಂಕಟಕ್ಕೊಳಗಾಗುವುದು,ಕೆಲಸದ ಸ್ಥಳಗಳಲ್ಲಿ ಮಾಲೀಕರು, ಸಹೋದ್ಯೋಗಿಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಪಡುವ ಪಡಿಪಾಟಲುಗಳು--ಕೆಲವು ವರ್ಷದ ಹಿಂದೆ ಎಫ್ ಬಿಯಲ್ಲಿ ಒಂದು ಪೋಸ್ಟ್ ವೈರಲ್ ಆಗಿತ್ತು,ಅದು ಕೊಲ್ಲಿ ದೇಶಗಳಿಗೆ ದುಡಿದು ಹಣ ಗಳಿಸುವ ಆಸೆ ಹೊತ್ತು ತಾಯ್ನಡು ಬಿಟ್ಟು ಹೋಗಿ ಅಲ್ಲಿ ಶ್ರಮಿಕ ವರ್ಗದವರಾಗಿ ಕೆಲಸ ಮಾಡುತ್ತಿರುವ ಪುರುಷರ ಪರಿಸ್ಥಿತಿ-ದಿನವಿಡೀ ಉರಿವ ಬಿಸಿಲಡಿಯಲ್ಲಿ ಕಷ್ಟದ ಕಟ್ಟಡ ಕೆಲಸಗಳು,ಎಷ್ಟೋ ಮಂದಿಗೆ ತಮ್ಮ ಊರಲ್ಲಿ ಈ ಪರಿಯ ಕಷ್ಟದ ಕೆಲಸ ಮಾಡಿಯೇ ತಿಳಿಯದು ಆದರೆ ಇಲ್ಲಿ ಬಂದಮೇಲೆಯೇ ಹೀಗೆಂದು ತಿಳಿದದ್ದು-ತಮ್ಮ ಊರಲ್ಲಿ ರಾತ್ರಿ ಮಲಗಲು ಅದೆಷ್ಟೋ ಇಂತಹ ಶ್ರಮಿಕರು ಒಂದು ಸೂರಿನಡಿಯಲ್ಲಿ ಒಂದಿಷ್ಟಗಲ ಜಾಗದಲ್ಲಿ-ಅಡಿಗೆ ತಾವೇ ಬೇ್ಯಿಸಿಕೊಂಡು ತಿನ್ನುವುದು--ಅಪರಿಚಿತ ಪರಿಸರದಲ್ಲಿ ದೇಹಕ್ಕೆ ಬರುವ ಖಾಯಿಲೆಗಳು-ಕೆಲವೊಮ್ಮೆ ವಿದೇಶದಲ್ಲಿ ದುಡಿಯಲು ಹೋಗುವ ತರುಣರ ಶೋಷಣೆಗಳೂ ಅಗುತ್ತವೆ- ಪಡೆದ ಹಣವನ್ನು ಏಜೆಂಟ್ ನುಂಗಿ ಹಾಕುವುದು-ಇಲ್ಲವೇ ಹೇಳಿದ್ದೊಂದು ಕೆಲಸವಾದರೆ ಅಲ್ಲಿ ಹೋದಮೇಲೆ ಇನ್ನೊಂದು ಅತಿ ಕಷ್ಟದ ಕೆಲಸ ಮಾಡಬೇ್ಕಾಗಿ ಬರುವುದು-ಅಲ್ಲಿಯ ಮಾಲೀಕರ ದೌರ್ಜನ್ಯನಮ್ಮೂರಿನ ಕೆಲವು ಹುಡುಗರು ಹಣ ಗಳಿಸಿ ಕುಟುಂಬವನ್ನು ಸುಖವಾಗಿಡುವ ಧ್ಯೇಯದಿಂದ ವಿದೇಶಕ್ಕೆ ಹೋದವರು ಅಲ್ಲಿಯೇ ಅಪಘಾತ ಖಾಯಿಲೆಗೆ ತುತ್ತಾಗಿ ಮರಣಿಸಿ ಮಗನ ಅಂತ್ಯದರ್ಶನವೂ ಆಗದೆಹೆತ್ತವರೆದೆಗೆ ಕಿಚ್ಚು ಹಚ್ಚಿರುವ ಘಟನೆಗಳೂ ಕರುಳು ಕೊರೆಯುತ್ತವೆ.ಅವನಿಲ್ಲದೆಯೇ ಇಲ್ಲಿ ನಡೆವ ಹಬ್ಬಗಳು ಕಳೆಗುಂದುತ್ತವೆ-ಅವನಲ್ಲಿ ನೆನಪಿನೋಕುಳಿಯಲ್ಲಿ ತೋಯುತ್ತಾನೆ-ಅಮ್ಮನ ಕೈಅಡುಗೆ-ಮನೆಯ ಹಬ್ಬದ ಸಂಭ್ರಮ -ಊರಿನ ಹಬ್ಬದ ವಾತಾವರಣ ಎಲ್ಲ ನೆನೆದು--ಫೋನೇ ವೀಡಿಯೋ ಚಾಟೇ ಅಂದಿಗೆ ಅಂತರ ಬೆಸೆಯುವ ಕೊಂಡಿ-ಹೃದಯದ ನೋವಿಗೆ ಮುಲಾಮು ಮದುವೆಯಾದ ನಂತರ ವಿದೇಶದಲ್ಲಿ ಕೆಲಸ ಮಾಡುವ ಎಲ್ಲರಿಗೂ ತಮ್ಮ ಪತ್ನಿಯನ್ನು ಅಲ್ಲಿಗೇ ಕರೆದೊಯ್ದು ಜೊತೆಗೆ ಜೀವನ ನಡೆಸುವುದು ಸಾಧ್ಯವಿಲ್ಲ,ಮದುವೆಯಾಗಿ ನವವಧುವನ್ನಿಲ್ಲಿಯೇ ಬಿಟ್ಟು ಹೋದರೆ ದೀರ್ಘ ವಿರಹದ ನೋವು ಇಬ್ಬರಿಗೂ-ಫೋನ್ ನಲ್ಲಿ ಮಾತುಕತೆ-ಫೋಟೋ ವೀಡಿಯೋ ವಿನಿಮಯದಲ್ಲಿಯೇ ತೃಪ್ತಿಪಟ್ಟುಕೊಳ್ಳಬೇಕು, ಮಗು ಹುಟ್ಟಿದ ಸುದ್ದಿ ಕೇಳಿ ಹರ್ಷ ಪಟ್ಟುಕೊಂಡರೂ ಅದನ್ನು ನೋಡುವುದು ಅದಕ್ಕೆ ವರ್ಷ ಎರಡು ಮೂರು ವರ್ಷ ಆದ ನಂತರವೇ,ತನ್ನದೇ ಕಂದನ ಬಾಲಲೀಲೆಗಳನ್ನು ನೋಡಿ ಹಿಗ್ಗುವ, ಅದನ್ನು ಎತ್ತಾಡಿಸಿ ಸಂತಸಪಡುವ ಅದರ ಬೆಳವಣಿಗೆಯನ್ನು ಪ್ರತಿದಿನ ಕಾಣುವ ಸೌಭಾಗ್ಯದಿಂದ ವಂಚಿತರಿವರು,ಮಗುವಿನ ತೊದಲು ನುಡಿಗಳನ್ನು ಫೋನ್ ನಲ್ಲಿ ಆಲಿಸಿ ಹಿಗ್ಗಬೇಕಷ್ಟೇ.ಹೆಂಡತಿ ಮಗು/ಮಕ್ಕಳ ಫೋಟೋಗಳನ್ನು ವಾಲೆಟ್ ನಲ್ಲಿರಿಸಿಕೊಂಡು ಏಕಾಂತದಲ್ಲಿದ್ದಾಗ ನೋಡಿ ಸಂತಸಪಡಬೇಕಷ್ಟೆ,ಮಕ್ಕಳ ಪಾಲಿಗೆ ಅಪ್ಪ ಎರಡು ಮೂರು ವರ್ಷಕ್ಕೊಮ್ಮೆ ಬರುವ ವಿಐ ಪಿ ಅತಿಥಿ-ಕೇಳಿದ್ದನ್ನೆಲ್ಲಾ ಕೊಡಿಸುವ ಹಾಗೂ ವಿದೇಶೀ ವಸ್ತುಗಳನ್ನುತರುವ ಒಬ್ಬ ವ್ಯಕ್ತಿ ಅಷ್ಟೇ-ಅಲ್ಲಿ ಭಾವನಾತ್ಮಕ ಸಂಬಂಧ ಮರೆಯಾಗಿರುತ್ತದೆ.ಇವರು ತಮ್ಮ ಕುಟುಂಬಕ್ಕಷ್ಟೇ ಅಲ್ಲದೆ ಬಂಧುಬಾಂಧವರಿಗೂ ಆರ್ಥಿಕ ಸಹಾಯ ಮಾಡುತ್ತಾರೆ,ನದಿನಿಯರ ಮದುವೆಗೆ,ಭಾವ ಮೈದುನಂದಿರಿಗೆ ಅಂಗಡಿ ಇಟ್ಟುಕೊಳ್ಳಲು, ಅಭಿವೃಧ್ಧಿ ಮಾಡಲು, ಅಥವಾ ಅವರೂ ವಿದೇಶಕ್ಕೆಉದ್ಯೋಗ ಮಾಡಲು ಹೋಗಲು ನೆರವಾಗುತ್ತಾರೆ ಕೆಲವರು ಪತ್ನಿ ಮಕ್ಕಳನ್ನು ವಿಸಿಟಿಂಗ್ ವೀಸದಲ್ಲಿ ಕರೆಸಿಕೊಂಡು ಕೆಲ ಸಮಯ ಜೊತೆಗಿರಿಸಿಕೊಂಡು ಸಮಾಧಾನ ಪಡೆವರು.ಆದರೆ ಅದಕ್ಕೆಲ್ಲ ತುಂಬಾ ಖರ್ಚಾಗುವುದರಿಂದ ಅದಕ್ಕೂ ಹಿಡಿತ , ಮಕ್ಕಳು ಮರಿಗೆ ಆಸ್ತಿ ಮಾಡಿಡಬೇಕು-ಅವರ ವಿದ್ಯಾಭ್ಯಾಸ ಮಾಡಿಸಬೇಕು-ಮಕ್ಕಳಿಗೆ ಅವರ ಬೇಡಿಕೆಯ ವಸ್ತುಗಳನ್ನೆಲ್ಲ ಕೊಡಿಸಬೇಕು, ಹ್ಂಡತಿಯ ಹೆಣ್ಣುಮಕ್ಕಳಮೈಮೇಲೆ ಇನ್ನಷ್ಟು ಬಂಗಾರ ಹಾಕಬೇಕು ಅವರಿಗೆಲ್ಲ ಓಡಾಡಲು ವಾಹನ ಕೊಳ್ಳಬೇಕು--- ಹೆಣ್ಣುಮಕ್ಕಳಮದುವೆ ಮಾಡಬೇಕು--ತಾಯಿ ತಂದೆಯರ ಆಪರೇಷನ್ ಗಳಿಗೆ ಚಿಕಿತ್ಸೆ-ಮುಗಿಯುವುದಿಲ್ಲ ಇವರ ಜವಾಬ್ದಾರಿಗಳ ಹೊಣೆಗಾರಿಕೆಗಳ ಪಟ್ಟಿ ಅದಕ್ಕಾಗಿ ವಿದೇಶದಲ್ಲಿಯೇ ದುಡಿಯುವುದು-ಊರಿಗೆ ಹಣ ಕಳಿಸುವುದು- ಎರಡು ಮೂರು ವರ್ಷಗಳಿಗೊಮ್ಮೆ ಊರಿಗೆ ಬರುವುದು --ಹೀಗೆಯೇ ಅವರ ಜೀವನದ ಬಹುಪಾಲೆಲ್ಲಾ ಕಳೆಯುತ್ತದೆ--ಅವರ ಪಾಡು-ಹಾಡು -ನೋವು-ಸಂಕಟಗಳು ಅವರೊಳಗೇ ಉಳಿದುಬಿಡುತ್ತದೆ,ಆತ ಜೀವನವಿಡೀ ಪರದೇಶದಲ್ಲಿ ಒಂಟಿತನ ,ವಿರಹ-ಮಿಸ್ಸಿಂಗ್ ಫೀಲಿಂಗ್ ಗಳನ್ನು ಅನುಭವಿಸುತ್ತಾ ಹಣಗಳಿಸುವ ಯಂತ್ರವಾಗಿಬಿಡುತ್ತಾನೆ,ಅವನ ಪತ್ನಿಯಿಲ್ಲಿ ಉಳಿದ ಹೆಣ್ಣು ಮಕ್ಕಳ ದೃಷ್ಟಿಯಲ್ಲಿ ಅತ್ಯಂತ ಸುಖಿ ಎಂದು ಕಂಡರೂ ಸಂಗಾತಿಯ ಅಗಲಿಕೆಯ ನೋವು ಒಳಗೆಯೇ ಕೊರೆಯುತ್ತಾ ಅವನ ಬರುವಿನ ದಿನಗಳಿಗಾಗಿಯೇ ಚಾತಕ ಪಕ್ಷಿಯಂತೆ ಕಾಯುತ್ತಾ ನರಳುವ ಚಿರವಿರಹಿನಿಯಾಗಿ ಜೀವನ ಕಳೆಯುತ್ತಾಳೆ. ಕೆಲವು ಹೆಂಗಸರೂ ಸಹ ಮನೆಯ ಬಡತನ ನೀಗುವುದೆಂಬ ಮಹದಾಸೆಯಿಂದ ಏಜೆಂಟ್ ಗಳ ಮಾತು ನಂಬಿಕೊಂಡು ಅಲ್ಲಿಯ ಅರಬರ ಮನೆಗಳಿಗೆ ಮನೆಕೆಲಸಕ್ಕೆಂದು ಹೋಗಿ ಅಲ್ಲಿ ಪಡಬಾರದ ಪಾಡು ಪಟ್ಟು ದೌರ್ಜನ್ಯಕ್ಕೊಳಗಾಗಿ ಕೊನೆಗೆ ಹೇಗೋ ಏನೋ ಜೀವ ಉಳಿದರೆ ಸಾಕೆಂದು ಹರಸಾಹಸಪಟ್ಟು ತಾಯ್ನಡಿಗೆ ಹಿಂದಿರುಗಿರುವ ಘಟನೆಗಳೂ ಕೇಳಿಬರುತ್ತಿವೆ. ಕೆಲವರು ಅಲ್ಲಿ ಕೆಲ ವರ್ಷ ಹೀಗೆ ದುಡಿದು ಆರೋಗ್ಯ ಸಮಸ್ಯೆಗಳಿಂದ ಬಳಲಿ ಇನ್ನು ಅಲ್ಲಿರಲಾಗದೆ ವಾಪಸ್ ಬಂದು ದುಡಿದಿರುವ ಸ್ವಲ್ಪ ಹಣವನ್ನು ಬಂಡವಾಳವಾಗಿರಿಸಿಕೊಂಡು ಏನಾದರೂ ಉದ್ಯೋಗ ಮಾಡುವುದೂ ಇದೆ,ಅಷ್ಟರಲ್ಲಿ ಬದುಕಿನಲ್ಲಿ ಚಾರ್ಮ್ ಮುಗಿದುಹೋಗಿರುತ್ತೆ, ಅದೇನೇನೋ ಖಾಯಿಲೆಗಳೂ ದೇಹವನ್ನು ಅಡರಿಕೊಂಡಿತುತ್ತೆ-ಉಳಿದಾಯುಷ್ಯ ಡಾಕ್ಟರ್-ಆಸ್ಪತ್ರೆ-ಚಿಕಿತ್ಸೆ ಇತ್ಯಾದಿಯಲ್ಲಿ,ಅವರ ಗಂಡುಮಕ್ಕಳು ಅಷ್ಟರಲ್ಲಿ ವಿದೇಶಕ್ಕೆ ಹೋಗಿ ದುಡಿದು ಹಣ ಮಾಡುವ ಬಯಕೆಯಿಂದ ರೆಡಿಯಾಗುತ್ತಾರೆ, ಈ ಚೈನ್ ಮುಂದುವರೆಯುತ್ತದೆ,ಇಲ್ಲಿ ಊರು ಬೆಳೆಯುತ್ತದೆ-ಹೊಸ ಮನೆಗಳು ಏಳುತ್ತವೆ. ತುಂಬ ಹೆಚ್ಚು ಓದಿ ವಿದೇಶಗಳಲ್ಲಿ ಉದ್ಯೋಗ ಗಿ್ಟ್ಟಿಸಿ ಅಲ್ಲಿಯೇ ಹೆಂಡತಿ ಮಕ್ಕಳೊಂದಿಗೆ ಸೆಟಲ್ ಆದವರದ್ದು ಇನ್ನೊಂದು ರೀತಿ,ಅವರಿಗೂ ಊರಿನ ವ್ಯಾಮೋಹ ಕಾಡುತ್ತಿರುತ್ತೆ,ಆದರೆ ಅಷ್ಟರಲ್ಲಿಹೆಂಡತಿ ಮಕ್ಕಳು ಅಲ್ಲಿಯ ಸಂಸ್ಕೃತಿ ಒಗ್ಗಿಸಿಕೊಂಡುಬಿಟ್ಟಿರುತ್ತಾರೆ,ಅವರಿಗೆ ಅಲ್ಲಿಯ ಬದುಕೇ ಇಷ್ಟ,ಮನೆಯಲ್ಲಿರುವ ತಂದೆ ತಾಯಿ ನಮ್ಮ ಮಗ ಸೊಸೆ ಎಲ್ಲ ಅಮೆರಿಕದಲ್ಲಿದ್ದಾರೆ, ಆಸ್ಟೇಲಿಯದಲ್ಲಿ ಇಂಗ್ಲೆಂಡ್ ಕೆನಡಾ ಎಂದೆಲ್ಲಬಂಧು ಬಾಂಧವರು ಇಷ್ಟಮಿತ್ರರಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ,ಆದರೆ ವೃಧ್ಧಾಪ್ಯದ ದಿನಗಳಲ್ಲಿ ಅವರ ಕೈ ಹಿಡಿದು ನಡೆಸುವ ಆಸರೆಯಿಲ್ಲ-ಆರೈಕೆ ಮಾಡುವವರಿಲ್ಲ-ಹಣಕ್ಕೆ ಕೊರತೆ ಇಲ್ಲ ಆದರೇನು?ಪ್ರೀತಿ ಆತ್ಮೀಯತೆತೋರಬೇಕಾದವರು, ಆಸರೆಯಾಗಬೇಕಾದವರು ದೂರದಲ್ಲಿದ್ದಾರೆ---ಖಾಯಿಲೆ ಬಂದಾಗ ಅವರಿವರ ಸಹಾಯವೇ ಬೇಕು -ಕಾಡುವ ಅನಾಥ ಭಾವ ಇವರಿಗೆ--ಅತ್ತ ಅಲ್ಲಿರುವ ಮಕ್ಕಳಿಗೂ ಎಲ್ಲಿಯೋ ಕಳೆದುಹೋದ ಭಾವಗಳಿಂದ ಮನದಾಳದಲ್ಲಿನ ಹಳಹಳಿಗಳಿಂದ ನೆಮ್ಮದಿ ಇರದು, ಇಲ್ಲಿಯೇ ಇದ್ದುಕೊಂಡು ಉದ್ಯೋಗ ಬಿಸಿನೆಸ್ ಮಾಡುವ ತರುಣರು ಮಾತ್ರ "ಛೆ ನಾನೂ ಅವನ ಹಾಗೆ ಫಾರಿನ್ ಗೆ ಹೋಗಿದ್ದಿದ್ದ್ರೆ ತುಂಬಾ ಹಣ ಮಾಡಬಹುದಿತ್ತು- ಇಲ್ಲಿಯೇ ಇದ್ದುಕೊಂಡು ಹೀಗೆ ನೂರು, ಸಾವಿರ ರುಪಾಯಿ ಗಳಿಸಲೂ ಒದ್ದಾಡಬೇಕಿತ್ತೆ? ನನ್ ನಸೀಬು ಸರಿಇಲ್ಲ ಎಂದು ಹಳಿದುಕೊಳ್ಳುತ್ತಾರೆ.ದೂರದ ಬೆಟ್ಟ ಯಾ್ವಾಗಲೂ ನುಣ್ಣಗೆ--ಅಲ್ಲವೆ?
ರೇಷ್ಮಾ ಎ ಎಸ್
Friday, 6 October 2017
Impu - Melodious:One more wonderful click from brother BEHROUZ RESHADand my comment on the photo
Impu - Melodious:
One more wonderful click from brother BEHROUZ RESHAD and my comment on this photo
ಬದುಕಿನ ದಾರಿಯುದ್ದಕ್ಕೂ
ನಡೆದು ನಡೆದು ಸೋತಿವೆ ಕಾಲ್ಗಳು
ಸಿಗಲಿಲ್ಲಸಮಯ ಈವರೆವಿಗೂ
ಕುಳಿತು ದಣಿವಾರಿಸಿಕೊಳ್ಳಲು
ಹೊತ್ತು ಸಾಕಾಯ್ತುನೂರೆಂಟುಹೊಣೆಗಳು
ಇನ್ನು ನಡೆಯಲಾರೆ ಎನ್ನುತಿವೆ ಹೆಜ್ಜೆಗಳು
ಇಗೊ ಕಂಡಿತೊಂದು ನೆಲೆ
ತುಸು ಹೊತ್ತುಕುಳಿತುಬಿಡುವೆನಿಲ್ಲೆ
ಸಾಗಿ ಬಂದ ದೂರವೆಷ್ಟು?
ಹೊತ್ತು ನಡೆದ ಭಾರವೆಷ್ಟು?
ದಕ್ಕಿತೆಷ್ಟು ಸುಖ ದುಖ್ಖ?
ಸಿಗುತಲಿಲ್ಲ ಅದರ ಲೆಕ್ಕ
ಇನ್ನುಳಿದ ದಾರಿ ಚಿಕ್ಕ
ಅದುವೆ ಮಾತ್ರ ಪಕ್ಕ.
ಉಳಿದ ಸ್ವಲ್ಪ ದಾರಿ ಕ್ರಮಿಸೆ
ಶಕ್ತಿ ನೀಡು ಪ್ರಭುವೆ
ಮರಣವಿರಲಿ ಅನಾಯಾಸ
ನಿನ್ನೆಡೆಗೆ ಬಂದು ಬಿಡುವೆ.
Tired of walking all the way
without taking rest or gap
almost the end of lifes journey
legs praying please stop plz stop
my feet not willing to move
tired of all burden carried all the way
thank God found a spot to rest
will rest here for few minutes
sitting here i am brooding
over the days of my past
sitting here i am wondering
what all i gained and have lost
Trying to calculate
what all sorrows troubles i faced
trying to recall, remember
all happy moments i enjoyed
i cant rest here for long i know
as still some more journey is left
the rest of my journey is very short i know
would like to walk on my own to complete
Have mercy oh my dear Lord
dont make the end of my journey hard
ಬದುಕಿನ ದಾರಿಯುದ್ದಕ್ಕೂ
ನಡೆದು ನಡೆದು ಸೋತಿವೆ ಕಾಲ್ಗಳು
ಸಿಗಲಿಲ್ಲಸಮಯ ಈವರೆವಿಗೂ
ಕುಳಿತು ದಣಿವಾರಿಸಿಕೊಳ್ಳಲು
ಹೊತ್ತು ಸಾಕಾಯ್ತುನೂರೆಂಟುಹೊಣೆಗಳು
ಇನ್ನು ನಡೆಯಲಾರೆ ಎನ್ನುತಿವೆ ಹೆಜ್ಜೆಗಳು
ಇಗೊ ಕಂಡಿತೊಂದು ನೆಲೆ
ತುಸು ಹೊತ್ತುಕುಳಿತುಬಿಡುವೆನಿಲ್ಲೆ
ಸಾಗಿ ಬಂದ ದೂರವೆಷ್ಟು?
ಹೊತ್ತು ನಡೆದ ಭಾರವೆಷ್ಟು?
ದಕ್ಕಿತೆಷ್ಟು ಸುಖ ದುಖ್ಖ?
ಸಿಗುತಲಿಲ್ಲ ಅದರ ಲೆಕ್ಕ
ಇನ್ನುಳಿದ ದಾರಿ ಚಿಕ್ಕ
ಅದುವೆ ಮಾತ್ರ ಪಕ್ಕ.
ಉಳಿದ ಸ್ವಲ್ಪ ದಾರಿ ಕ್ರಮಿಸೆ
ಶಕ್ತಿ ನೀಡು ಪ್ರಭುವೆ
ಮರಣವಿರಲಿ ಅನಾಯಾಸ
ನಿನ್ನೆಡೆಗೆ ಬಂದು ಬಿಡುವೆ.
Tired of walking all the way
without taking rest or gap
almost the end of lifes journey
legs praying please stop plz stop
my feet not willing to move
tired of all burden carried all the way
thank God found a spot to rest
will rest here for few minutes
sitting here i am brooding
over the days of my past
sitting here i am wondering
what all i gained and have lost
Trying to calculate
what all sorrows troubles i faced
trying to recall, remember
all happy moments i enjoyed
i cant rest here for long i know
as still some more journey is left
the rest of my journey is very short i know
would like to walk on my own to complete
Have mercy oh my dear Lord
dont make the end of my journey hard
ಬಾಳೇ ಹೊನ್ನೂರಿನ ನೀರ್ದಾಣ "ಇಟ್ಟಿಗೆ ಕೆರೆಯ "ಸೊಬಗು----
ಬಿ ಕಣಬೂರು ಗ್ರಾಮದ ವ್ಯಾಪ್ತಿಗೆ ಸೇರಿದ ಇಟ್ಟಿಗೆಯಲ್ಲಿ ಒಂದು ಕೆರೆ ಇದೆ, ಇದು ಇಟ್ಟಿಗೆ ಕೆರೆ ಎಂದೇ ಪ್ರಸಿಧ್ಧ.ಇದನ್ನು ನೋಡುವುದು ಇತ್ತೀಚೆಗೆ ಸಾಧ್ಯ ಆಯಿತು.ಆದರೆ ಅದರ ಬಳಿಯ ದೇವಸ್ಥಾನ ಇತ್ಯಾದಿ ನೋಡಲು ಸಮಯವಿರಲಿಲ್ಲ, ಇನ್ನೊಮ್ಮೆ ಹೋಗಬೇಕು,ಈ ಇಟ್ಟಿಗೆ ಕೆರೆ ಎತ್ತರದ ಜಾಗದಲ್ಲಿದ್ದು ಇ್ದು ಬಾಳೇಹೊನ್ನೂರಿನ ಧೋಭಿಹಳ್ಳ,ನಮ್ಮ ಬೀದಿಯ ಹಿಂಬದಿಯ ಕಟ್ಟ ಮತ್ತು ಬಾಳೆಹೊನ್ನೂರಿನ ಎಲ್ಲ ಬಾವಿಗಳಿಗೆ ನೀರಿನ ಸಂಪನ್ಮೂಲವಾಗಿದೆ.ಬಾಳೇಹೊನ್ನೂರಿನ ಬಹುತೇಕ ಗದ್ದೆ ತೋಟಗಳಿಗೆ ಈ ಇಟ್ಟಿಗೆ ಕೆರೆಯದ್ದೇ ನೀರಿನ ಕೃಪೆ. ಈ ಕೆರೆಯಲ್ಲಿ ನೀರು ಬತ್ತಿದ್ದೇ ಇಲ್ಲವಂತೆ.ಈ ಕೆರೆಯ ಬಗ್ಗೆ ಅನೇಕ ದಂತ ಕತೆಗಳೂ ಇವೆ, ಇದರಲ್ಲಿ ಒಂದು ದೊಡ್ಡ ರಥ ಮುಳುಗಿದೆ ಎನ್ನುತ್ತಾರೆ ಕೆಲವರು, ಇದರೊಳಗೆ ಒಂದು ಸುರಂಗ ಮಾರ್ಗವಿದೆ ಎಂದೂ ಹೇಳುತ್ತಾರೆ ಕೆಲವರು,ಇದರ ಪಕ್ಕದಲ್ಲಿಯ ಕಾಫಿ ಬೆಳೆಗಾರರಾದ ಸುರೇಶ್ ಪೈ ರವರು ಈ ಕೆರೆಯನ್ನು ಸ್ವಚ್ಚಗೊಳಿಸಿ ತಮ್ಮ ಎಸ್ವ್ಟೇಟ್ ನಲ್ಲಿ ರೂಪಿಸಿದ್ದ ರೆಸಾರ್ಟ್ ಗೆ ಬರುವ ಅಥಿತಿ ಗಳಿಗೆ ಇದರಲ್ಲಿ ಬೋಟಿಂಗ್ ಸೌಲಭ್ಯ ಕಲ್ಪಿಸಿದ್ದರಂತೆ, ಈಗ ಆ ರೆಸಾರ್ಟ್ ಮುಚ್ಚಲ್ಪಟ್ಟಿದೆ ಎಂದು ತಿಳಿದುಬಂತು, ಇದರ ಬಳಿಯಲ್ಲಿ ಲಕ್ಷ್ಮೀನಾರಾಯಣಸ್ವಾಮಿ ದೇಗುಲವಿದ್ದು ಈ ದೇಗುಲದಲ್ಲಿಅರ್ಚಕರಾಗಿ ಪೂಜೆ ಸಲ್ಲಿಸುವ ಕೈಂಕರ್ಯ ಮಾಡುತ್ತಿರುವ ಕುಟುಂಬವಿದೆ,ಆ ಕುಟುಂಬದ ಮುಖ್ಯಸ್ಥರಾಗಿದ್ದ ಕೃಷ್ಣ ಮೂರ್ತಿ ಕಾರಂತರು ಇತ್ತೀಚೆಗೆ ನಿಧನರಾದರು,ಈ ಕೆರೆ ಸಾಕಷ್ಟು ವಿಶಾಲವಾಗಿದೆ, ಇಲ್ಲಿ ತುಂಬಾ ಕಮಲದ ಹೂಗಳು ಅರಳುತ್ತವಂತೆ, ಅನೇಕರು ದಿನವಿಡೀ ಬಲೆ ಹಾಕಿ ಕುಳಿತು ಮೀನು ಹಿಡಿಯುತ್ತಿರುತ್ತಾರೆ ಸಹ, ನಾವು ಅಲ್ಲಿ ಹೋದಾಗ ಸಹ ಇಬ್ಬರು ಬಲೆ ಹಾಕಿ ಮೀನುಗಳಿಗಾಗಿ ಕಾಯುತ್ತಿದರು,ಈ ಮೊದಲು ತುಂಬಾ ಹೂಳು ಇದ್ದ ಕಾರಣ ಬಹಳ ವರ್ಷಗಳ ಹಿಂದೆ ಒಮ್ಮೆ ಮಾತ್ರ ಕೆರೆ ನೀರನ್ನು ಖಾಲಿ ಮಾಡಿ ಹೂಳು ತೆಗೆದಿದ್ದರಂತೆ.ಕೆರೆಯ ಸುತ್ತ ನೈಸರ್ಗಿಕವಾಗಿ ಬೆಳೆದ ಗಿಡಮರಗಳ ಹಸಿರ ಹಿನ್ನೆಲೆ ಇದೆ. ಹಸಿರು ಗಿಡ ಮರಗಳು, ನೀಲಿ ಆಗಸ,ದೂರದಲ್ಲಿ ತಲೆಯೆತ್ತಿ ನಿಂತ ಬೆಟ್ಟಗಳ ಸಾಲಿನ ಹಿನ್ನೆಲೆಯಲ್ಲಿ ಕೆರೆ ಸುಂದರವಾಗಿ ಕಾಣಿಸುತ್ತೆ, ಆದರೆ ಕೆರೆ ದಂಡೆಯಲ್ಲೆಲ್ಲಅಲ್ಲಲ್ಲಿ ಮಲವಿಸರ್ಜನೆ ಮಾಡಿರುವುದು ಜಿಗುಪ್ಸೆ ಹುಟ್ಟಿಸಿತು, ಕೆರೆ ನದಿಗಳನ್ನು ಶುಭ್ರವಾಗಿ ಇರಿಸಿಕೊಳ್ಳುವ ಮನೋಭಾವ ಜನರಲ್ಲಿ ಮೂಡಬೇಕು,
ಇನ್ನೊಮ್ಮೆಅಲ್ಲಿಗೆ ಹೋಗಿ ಹೆಚ್ಚಿನ ವಿವರ ಸಂಗ್ರಹಿಸಬೇಕೆಂದಿದೆ, ಮೊನ್ನೆ ಸಮಯದ ಅಭಾವವಿದ್ದುದರಿಂದ ಇನ್ನೂ ಹೆಚ್ಚಿನ ವೀಕ್ಷಣೆ ಸಾಧ್ಯವಾಗಲಿಲ್ಲ.
ಬಿ ಕಣಬೂರು ಗ್ರಾಮದ ವ್ಯಾಪ್ತಿಗೆ ಸೇರಿದ ಇಟ್ಟಿಗೆಯಲ್ಲಿ ಒಂದು ಕೆರೆ ಇದೆ, ಇದು ಇಟ್ಟಿಗೆ ಕೆರೆ ಎಂದೇ ಪ್ರಸಿಧ್ಧ.ಇದನ್ನು ನೋಡುವುದು ಇತ್ತೀಚೆಗೆ ಸಾಧ್ಯ ಆಯಿತು.ಆದರೆ ಅದರ ಬಳಿಯ ದೇವಸ್ಥಾನ ಇತ್ಯಾದಿ ನೋಡಲು ಸಮಯವಿರಲಿಲ್ಲ, ಇನ್ನೊಮ್ಮೆ ಹೋಗಬೇಕು,ಈ ಇಟ್ಟಿಗೆ ಕೆರೆ ಎತ್ತರದ ಜಾಗದಲ್ಲಿದ್ದು ಇ್ದು ಬಾಳೇಹೊನ್ನೂರಿನ ಧೋಭಿಹಳ್ಳ,ನಮ್ಮ ಬೀದಿಯ ಹಿಂಬದಿಯ ಕಟ್ಟ ಮತ್ತು ಬಾಳೆಹೊನ್ನೂರಿನ ಎಲ್ಲ ಬಾವಿಗಳಿಗೆ ನೀರಿನ ಸಂಪನ್ಮೂಲವಾಗಿದೆ.ಬಾಳೇಹೊನ್ನೂರಿನ ಬಹುತೇಕ ಗದ್ದೆ ತೋಟಗಳಿಗೆ ಈ ಇಟ್ಟಿಗೆ ಕೆರೆಯದ್ದೇ ನೀರಿನ ಕೃಪೆ. ಈ ಕೆರೆಯಲ್ಲಿ ನೀರು ಬತ್ತಿದ್ದೇ ಇಲ್ಲವಂತೆ.ಈ ಕೆರೆಯ ಬಗ್ಗೆ ಅನೇಕ ದಂತ ಕತೆಗಳೂ ಇವೆ, ಇದರಲ್ಲಿ ಒಂದು ದೊಡ್ಡ ರಥ ಮುಳುಗಿದೆ ಎನ್ನುತ್ತಾರೆ ಕೆಲವರು, ಇದರೊಳಗೆ ಒಂದು ಸುರಂಗ ಮಾರ್ಗವಿದೆ ಎಂದೂ ಹೇಳುತ್ತಾರೆ ಕೆಲವರು,ಇದರ ಪಕ್ಕದಲ್ಲಿಯ ಕಾಫಿ ಬೆಳೆಗಾರರಾದ ಸುರೇಶ್ ಪೈ ರವರು ಈ ಕೆರೆಯನ್ನು ಸ್ವಚ್ಚಗೊಳಿಸಿ ತಮ್ಮ ಎಸ್ವ್ಟೇಟ್ ನಲ್ಲಿ ರೂಪಿಸಿದ್ದ ರೆಸಾರ್ಟ್ ಗೆ ಬರುವ ಅಥಿತಿ ಗಳಿಗೆ ಇದರಲ್ಲಿ ಬೋಟಿಂಗ್ ಸೌಲಭ್ಯ ಕಲ್ಪಿಸಿದ್ದರಂತೆ, ಈಗ ಆ ರೆಸಾರ್ಟ್ ಮುಚ್ಚಲ್ಪಟ್ಟಿದೆ ಎಂದು ತಿಳಿದುಬಂತು, ಇದರ ಬಳಿಯಲ್ಲಿ ಲಕ್ಷ್ಮೀನಾರಾಯಣಸ್ವಾಮಿ ದೇಗುಲವಿದ್ದು ಈ ದೇಗುಲದಲ್ಲಿಅರ್ಚಕರಾಗಿ ಪೂಜೆ ಸಲ್ಲಿಸುವ ಕೈಂಕರ್ಯ ಮಾಡುತ್ತಿರುವ ಕುಟುಂಬವಿದೆ,ಆ ಕುಟುಂಬದ ಮುಖ್ಯಸ್ಥರಾಗಿದ್ದ ಕೃಷ್ಣ ಮೂರ್ತಿ ಕಾರಂತರು ಇತ್ತೀಚೆಗೆ ನಿಧನರಾದರು,ಈ ಕೆರೆ ಸಾಕಷ್ಟು ವಿಶಾಲವಾಗಿದೆ, ಇಲ್ಲಿ ತುಂಬಾ ಕಮಲದ ಹೂಗಳು ಅರಳುತ್ತವಂತೆ, ಅನೇಕರು ದಿನವಿಡೀ ಬಲೆ ಹಾಕಿ ಕುಳಿತು ಮೀನು ಹಿಡಿಯುತ್ತಿರುತ್ತಾರೆ ಸಹ, ನಾವು ಅಲ್ಲಿ ಹೋದಾಗ ಸಹ ಇಬ್ಬರು ಬಲೆ ಹಾಕಿ ಮೀನುಗಳಿಗಾಗಿ ಕಾಯುತ್ತಿದರು,ಈ ಮೊದಲು ತುಂಬಾ ಹೂಳು ಇದ್ದ ಕಾರಣ ಬಹಳ ವರ್ಷಗಳ ಹಿಂದೆ ಒಮ್ಮೆ ಮಾತ್ರ ಕೆರೆ ನೀರನ್ನು ಖಾಲಿ ಮಾಡಿ ಹೂಳು ತೆಗೆದಿದ್ದರಂತೆ.ಕೆರೆಯ ಸುತ್ತ ನೈಸರ್ಗಿಕವಾಗಿ ಬೆಳೆದ ಗಿಡಮರಗಳ ಹಸಿರ ಹಿನ್ನೆಲೆ ಇದೆ. ಹಸಿರು ಗಿಡ ಮರಗಳು, ನೀಲಿ ಆಗಸ,ದೂರದಲ್ಲಿ ತಲೆಯೆತ್ತಿ ನಿಂತ ಬೆಟ್ಟಗಳ ಸಾಲಿನ ಹಿನ್ನೆಲೆಯಲ್ಲಿ ಕೆರೆ ಸುಂದರವಾಗಿ ಕಾಣಿಸುತ್ತೆ, ಆದರೆ ಕೆರೆ ದಂಡೆಯಲ್ಲೆಲ್ಲಅಲ್ಲಲ್ಲಿ ಮಲವಿಸರ್ಜನೆ ಮಾಡಿರುವುದು ಜಿಗುಪ್ಸೆ ಹುಟ್ಟಿಸಿತು, ಕೆರೆ ನದಿಗಳನ್ನು ಶುಭ್ರವಾಗಿ ಇರಿಸಿಕೊಳ್ಳುವ ಮನೋಭಾವ ಜನರಲ್ಲಿ ಮೂಡಬೇಕು,
ಇನ್ನೊಮ್ಮೆಅಲ್ಲಿಗೆ ಹೋಗಿ ಹೆಚ್ಚಿನ ವಿವರ ಸಂಗ್ರಹಿಸಬೇಕೆಂದಿದೆ, ಮೊನ್ನೆ ಸಮಯದ ಅಭಾವವಿದ್ದುದರಿಂದ ಇನ್ನೂ ಹೆಚ್ಚಿನ ವೀಕ್ಷಣೆ ಸಾಧ್ಯವಾಗಲಿಲ್ಲ.
Friday, 29 September 2017
Impu - Melodious: ಇದು ನನ್ನ ಬ್ಲಾಗ್
Impu ಸೂರು ಇಲ್ಲದಿದ್ದರೇನಂತೆ
ಸ್ವರಕೆ ಇಲ್ಲ ಕೊರತೆ
ಹಸಿವು ಕಾಡುತಿರಲಂತೆ
ಮನಸಿಗಿಲ್ಲ ಚಿಂತೆ
ರಾಗ ಭಾವ ಬೆರೆತೆ
ಚಿಮ್ಮುತಿಹುದುಒರತೆ
ಕೊಳಲ ನಾದದಿಂಪು
ಮನಕೆ ನೀಡೆ ತಂಪು
ಹಸಿವು ದೂರವಾಯ್ತು
ಹೃದಯ ತುಂಬಿ ಬಂತು
ಸ್ವರಕೆ ಇಲ್ಲ ಕೊರತೆ
ಹಸಿವು ಕಾಡುತಿರಲಂತೆ
ಮನಸಿಗಿಲ್ಲ ಚಿಂತೆ
ರಾಗ ಭಾವ ಬೆರೆತೆ
ಚಿಮ್ಮುತಿಹುದುಒರತೆ
ಕೊಳಲ ನಾದದಿಂಪು
ಮನಕೆ ನೀಡೆ ತಂಪು
ಹಸಿವು ದೂರವಾಯ್ತು
ಹೃದಯ ತುಂಬಿ ಬಂತು
Subscribe to:
Comments (Atom)




