Sunday, 29 October 2017

WORKING WOMEN AND DRESS CODE ದುಡಿವ ಮಹಿಳೆಯ ಉಡುಗೆ-ತೊಡುಗೆ
Albums
WORKING WOMEN AND DRESS CODE ದುಡಿವ ಮಹಿಳೆಯ ಉಡುಗೆ-ತೊಡುಗೆ
Edit
59 PhotosUpdated 2 years ago
WORKING WOMEN AND DRESS CODE ದುಡಿವ ಮಹಿಳೆಯ ಉಡುಗೆ-ತೊಡುಗೆ ನಾವು ಧರಿಸುವ ಉಡುಪು ನಮ್ಮ ವ್ಯಕ್ತಿತ್ವ ತಿಳಿಸುತ್ತದೆ ಎಂಬ ಮಾತಿದೆ, ಹಾಗೆಯೇ ಉಡುಪಿನಿಂದ ವ್ಯಕ್ತಿಯ ವ್ಯಕ್ತಿತ್ವ ಅಳೆಯಲಾಗದು ಎಂಬ ಉಕ್ತಿಯೂ ಇದೆ.ಆದರೆ ಮನೆಯಿಂದ ಹೊರಗೆ ಹೋಗಿ ದುಡಿಯುವ ಮಹಿಳೆ ಮನೆಯಲ್ಲಿ ಧರಿಸುವ ಉಡುಪನ್ನೇ ಹೊರಗೂ ಧರಿಸುವ ಹಾಗಿಲ್ಲ.ಮನೆಯಲ್ಲಿ ಎನೇ ಉಡುಪು ಧರಿಸಿ ಹೇಗೇ ಇದ್ದರೂ ನಡೆಯುತ್ತೆ. ಆದರೆ ಹೊರಗೆ ಕಚೇರಿಯಲ್ಲಿ ಹಲವರ ಜೊತೆಯಲ್ಲಿ ಕೆಲಸ ಮಾಡುವ ಮಹಿಳೆ ಅಲ್ಲಿಯ ವಾತಾವರಣಕ್ಕೆ ತಕ್ಕಂತಹ ಉಡುಪು ಧರಿಸಬೇಕಾದದ್ದು ಅಗತ್ಯ.ದುಡಿಯುವ ಮಹಿಳೆಯ ಉಡುಪೂ ಸಹ ಅವಳ ವೃತ್ತಿಯ ಯಶಸ್ಸಿನಲ್ಲಿ ಮುಖ್ಯ ಪಾತ್ರವನ್ನೇ ವಹಿಸುತ್ತದೆ.ಮೊದಲಿಗೆ ಉದ್ಯೋಗ ಹುಡುಕಿಕೊಂಡು ಹೋಗುವ ಮಹಿಳೆಯನ್ನು ಉದ್ಯೋಗದಾತರು ಅವಳನ್ನು ಕೆಲಸಕ್ಕೆ ತೆಗೆದುಕೊಳ್ಳುವುದೋ ಬಿಡುವುದೋ ಎಂಬ ನಿರ್ಣಯ ಮಾಡುವಲ್ಲಿ ಅವಳ ಉಡುಪೂ ಸಹ ಅವಳಬಗ್ಗೆ ಅಭಿಪ್ರಾಯ ರೂಪಿಸುವಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತದೆ. ಸಾಧಾರಣವಾಗಿ ದುಡಿಯುವ ಮಹಿಳೆಯ ಉಡುಪು ಹೀಗಿರಬೇಕು ಎಂಬ ಮಾರ್ಗದರ್ಶಿ ಸೂತ್ರ,ನಿಯಮ ಕೆಲಸದಿಂದ ಕೆಲಸಕ್ಕೆ,ಕಚೇರಿಯಿಂದ ಕಚೇರಿಗೆ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ, ದೇಶದಿಂದ ದೇಶಕ್ಕೆ ಬೇರೆಬೇರೆಯಾಗಿರುವುದು ಕಂಡುಬರುತ್ತದೆ.ದುಡಿವಮಹಿಳೆ ಪುರುಷ ಸಹೋದ್ಯೋಗಿಗಳೊಡನೆ , ಪುರುಷ ಗ್ರಾಹಕರೊಡನೆ ಕಾರ್ಯನಿರ್ವಹಿಸುವ, ವ್ಯವಹರಿಸುವ ಅಗತ್ಯವಿರುವುದರಿಂದ ಅವಳಿಗೆ ವಿಶೇಷ ವಸ್ತ್ರಸಂಹಿತೆ ರೂಪಿಸಲಾಗಿರುತ್ತದೆ, ಬಹಳಷ್ಟು ವೃತ್ತಿ ಗಳಲ್ಲಿ ವಿಶೇಷ ಸಮವಸ್ತ್ರವನ್ನು ಪುರುಷರಿಗೂ ಮಹಿಳೆಯರಿಗೂ ಕಡ್ದಾಯಗೊಳಿಸಲಾಗಿರುತ್ತದೆ, ಉದಾಹರಣೆಗೆ-ನರ್ಸ್,ಡಾಕ್ಟರ್,ಏರ್ ಹೋಸ್ಟೆಸ್,ಪೈಲೆಟ್,ಪೋಲೀಸ್,ಇತ್ಯಾದಿ.ಕೆಲವು ಫ್ಯಾಕ್ಟರಿಗಳಲ್ಲೂ ಸಮವಸ್ತ್ರ ಸಂಹಿತೆ ಇರುತ್ತೆ.ಆದರೆ ಇನ್ನಿತರ ವೃತ್ತಿಗಳನ್ನು ಮಾಡುವ ಕಾರ್ಯ ಕ್ಷೇತ್ರಗಳಲ್ಲಿ ಸಮವಸ್ತ್ರವಿಲ್ಲದಿದ್ದರೂ ಒಂದುರೀತಿಯ ಅಘೋಷಿತ ವಸ್ತ್ರ ಸಂಹಿತೆ ಇದ್ದೇಇರುತ್ತೆ, ಅದು ದುಡಿಯುವವರ ವಿವೇಚನೆಗೂ ಸಂಬಂಧಪಟ್ಟದ್ದಾಗಿರುತ್ತೆ.ಕಂಪೆನಿಗಳಲ್ಲಿ ಜೀನ್ಸ್, ಟೀಶರ್ಟ್,ಮಿನಿ, ಮಿಡಿ ಧರಿಸಬಾರದು ಎಂಬ ವಿಧಿ ವಿಧಿಸಲಾಗಿರುತ್ತೆ.ನಮ್ಮ ದೇಶದಲ್ಲಿಮಹಿಳಾ ಬಸ್ ಕಂಡಕ್ಟರ್, ಮಹಿಳಾ ಪೋಲೀಸ್ ಇವರಿಗೆ ಖಾಕಿ ಪ್ಯಾಂಟ್ ಶರ್ಟ್ ಧರಿಸಬೇಕೆಂಬ ನಿಯಮಕ್ಕೆ ಕೆಲವರಿಗೆ ಇದು ಕಷ್ಟ ಹಾಗೂ ಇರಿಸುಮುರಿಸಾಗುವುದೆಂಬ ಕಾರಣಕ್ಕೆ ಅದೇ ಬಣ್ಣದ ಸೀರೆ,ಚೂಡಿದಾರ್ ಅನ್ನು ಧರಿಸಲು ಅನುವು ಮಾಡಿಕೊಡಲಾಗಿದೆ. ಇನ್ನು ಶಿಕ್ಷಕಿಯರಿಗೆ ಸಮವಸ್ತ್ರವಿಲ್ಲದಿದ್ದರೂ,ಸೀರೆ ಧರಿಸಬೇಕೆಂಬುದು ಒಂದು ಅಘೋಷಿತ ನಿಯಮ.ಖಾಸಗಿ ಶಾಲೆ, ಕಾಲೇಜುಗಳಲ್ಲಿ ಅದೇನಿಲ್ಲ.ಶಿಕ್ಷಕಿಯರು ಇತರೇ ಉದುಪು ಧರಿಸಿ ಬಂದರೆ ಮಕ್ಕಳಿಗೂ ಅವರಿಗೂ ಯಾವವ್ಯತ್ಯಾಸವಿಲ್ಲದೇ ಮಕ್ಕಳು ಅವರಿಗೆ ಗೌರವ ತೋರುವುದಿಲ್ಲ ಎಂಬ ಕಾರಣ ನೀಡಲಾಗುತ್ತದೆ.ಆದರೆ ಕೆಲವು ಖಾಸಗಿ ಕಾಲೇಜುಗಳಲ್ಲಿ ಶಿಕ್ಷಕಿಯರು ಚೂಡಿದಾರ್, ಪ್ಯಾಂಟ್ ಶರ್ಟ್ ತೊಟ್ಟು ಬಂದು ಪಾಠ ಮಾಡುತ್ತಾರಾದರೂ ವಿದ್ಯಾರ್ಥಿಗಳು ಅವರಿಗೆ ಅಗೌರವ ತೋರಿಸಿದ್ದನ್ನು ಕಂಡಿಲ್ಲ.ಶಿಕ್ಶಕಿಯರ ಉಡುಪು ಯಾವುದೇ ಇರಲಿ ಮೈಮುಚ್ಚುವಂತೆ ಇದ್ದು ಅಸಭ್ಯವಾಗಿಲ್ಲದಿದ್ದರೆ ಸರಿ. ಸೀರೆಯನ್ನೇ ಸೊಂಟ,ಹೊಟ್ಟೆ ಹೊಕ್ಕಳು,ಅರ್ಧ ಎದೆಯ ಭಾಗ ಎಲ್ಲ ಕಾಣುವಂತೆ ಉಟ್ಟು, ಡೀಪ್ ನೆಕ್ ಲೈನ್ ಇರುವ ರವಿಕೆತೊಟ್ಟು ಬರುವ ಕೆಲವು ಶಿಕ್ಷಕಿಯರು ,ಪ್ಲಾಟ್ ಫಾರ್ಮ್ ಮೇಲೆ ನಿಂತು ಪಾಠ ಹೇಳುವ ಬೋರ್ಡ್ ನಲ್ಲಿ ಬರೆಯುವ ಕಾರ್ಯ ಮಾಡುವಾಗ ನೋಡುವ ಮಕ್ಕಳಿಗೂ ಮುಜುಗರ ಉಂಟಾಗುತ್ತದೆ,ಹಾಗೆಂದು ಮೈತುಂಬಾ ಸೆರಗು ಸುತ್ತಿಕೊಂಡು ಪಾಠ, ಬರವಣಿಗೆ ಮಾಡುವುದೂ ಆಗದು, ಅತಿ ಸೆಕ್ಸಿ ಉಡುಪೆನ್ನಿಸಿರುವ ಸೀರೆಗಿಂತ ಚೂಡಿದಾರ್ ತುಂಬಾ ಕಂಫರ್ಟಬಲ್, ಮತ್ತು ಮೈ ಅನ್ನು ಮುಚ್ಚುವ ಉಡುಪು, ಶಿಕ್ಷಕಿಯರಿಗೆ ಮಾದರಿ ಉಡುಪು ಎನ್ನಬಹುದು,ಸೀರೆ ಉಟ್ಟು ಶಾಲಾಕಾಲೇಜುಗಳಲ್ಲಿ ಪಾಠ ಹೇಳುವಾಗ ನೂರಾರು ಮಕ್ಕಳ ಕಣ್ಣುಗಳು ಶಿಕ್ಷಕರತ್ತಲೇನೆಟ್ಟಿರುತ್ತದೆ,ಅಂತಹ ಸಂದರ್ಭಗಳಲ್ಲಿ ತಿಳಿಯದೇಸೆರಗು ಸರಿಯುವುದೋ, ಧರಿಸಿದ ಒಳ ಉಡುಪಿನ ಪಟ್ಟಿ ರವಿಕೆಯ ಹೊರಗೆ ಇಣುಕುವುದೋ,ತೆಳ್ಳನೆಯ ರವಿಕೆಯ ಸೀರೆಯ ಬಣ್ಣ ಕ್ಕೆ ಹೊಂದದ ಒಳ ಉಡುಪು ಎದ್ದು ಕಾಣುತ್ತಲೋ ಹೀಗೇನಾದರೂ ಅಧ್ವಾನಗಳು ಆದಾಗ ಅದು ಅತಿಯದ ಮುಜುಗರದ ಕ್ಷಣ-ಮಕ್ಕಳಿಗೂ-ಶಿಕ್ಷಕಿಯರಿಗೂಕೆಲವುಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯರಿಗೆ ಸೀರೆ, ಅಥವಾ ಚೂಡಿದಾರ್ ಮೇಲೆ ಒಂದು ಸಮಾನ ಬಣ್ಣದ ಕೋಟ್ ಹಾಕುವುದನ್ನು ಕಡ್ಡಾಯ ಮಾಡಲಾಗಿರುತ್ತದೆ, ಇದೂ ಸಹ ಉತ್ತಮವಾದುದು. ದುಡಿವ ಮಹಿಳೆಗೆ ಸಮವಸ್ತ್ರವಿಲ್ಲದಿದ್ದರೂ ಆಕೆ ಧರಿಸುವ ವಸ್ತ್ರಗಳಬಗ್ಗೆ ಈ ಕೆಳಕಂಡ ಕಾಳಜಿ ಅತ್ಯಗತ್ಯ ೧-ಧರಿಸುವ ವಸ್ತ್ರ ಶುಭ್ರವಾಗಿದ್ದು,ಚೆನ್ನಾಗಿ ಐರನ್ ಮಾಡಿರಬೇಕು. ೨-ಧರಿಸುವ ವಸ್ತ್ರ ಸಭ್ಯತೆಯ ಎಲ್ಲೆಯನ್ನು ಮೀರದಂತೆ ಮೈ ಮುಚ್ಚುವಂತಿರಬೇಕು, ೩-ಧರಿಸಿದ ವಸ್ತ್ರ ಅತೀ ಬಿಗಿ ಇಲ್ಲ ಅತೀ ಸಡಿಲವಾಗಿಯೂ ಇರಬಾರದು. ೪-ಧರಿಸುವ ಉಡುಪು ಅತೀ ತೆಳ್ಳಗೆ ಇಲ್ಲವೇ ಅತೀ ದಪ್ಪವಾಗಿರಬಾರದು.ಬೇಸಗೆ ಚಳಿ, ಮಳೆಗಾಲಕ್ಕೆ ಅನುಗುಣವಾದ ಬಟ್ಟೆ ಅಗಿರಬೇಕು,ಕಂಫರ್ಟಬಲ್ ಅಗಿರಬೇಕು. ೫-ಧರಿಸುವ ಉಡುಪಿನ ಒಳಗೆ ಧರಿಸುವ ಒಳ ಉಡುಪುಗಳು, ಉಡುಪಿನ ಬಣ್ಣದ್ದೇ ಆಗಿದ್ದರೆ ಒಳಿತು. ಉತ್ತಮ, ಯೋಗ್ಯ ಉಡುಪು ಧರಿಸುವುದರಜೊತೆಗೆ ನಗೆಮೊಗ, ಮೆಲುಮಾತು,ಚುರುಕು ಕಾರ್ಯ ನಿರ್ವಹಣೆ ಇವೆಲ್ಲ ವೃತ್ತಿಯ ಯಶಸ್ಸಿಗೆ ಕಾರಣವಾಗುತ್ತದೆ.ಜೊತೆಗೆ ಪ್ರಾಮಾಣಿಕತೆ,ಪಾರದರ್ಶಕತೆ, ಬಧ್ಧತೆಗಳಂತೂ ಬೇಕೇ ಬೇಕು. ಉಡುಪಿನ ಜೊತೆಗೆ, ಧರಿಸುವ ಪಾದರಕ್ಷೆಗಳು,ಜಂಭದಚೀಲ,ಕೂದಲ ವಿನ್ಯಾಸ,ಆಭರಣಗಳು,ಕೊಡೆ,ಇವೆಲ್ಲವೂ ದುಡಿವ ಮಹಿಳೆಯ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ೧-ಪಾದರಕ್ಷೆಗಳು-ದುಡಿವ ಮಹಿಳೆ ವರ್ಷದ ಎಲ್ಲಾ ಕಾಲದಲ್ಲಿಯೂ ಹೊರಗೆ ಹೋಗಬೇಕು, ಓಡಾಡಬೇಕು, ಅದರಿಂದ ಕಾಲಕ್ಕೆ ತಕ್ಕಂತಹ, ಕಾಲಿಗೆ ಸರಿಯಾಗಿ ಹೊಂದುವಂತಹ,ಕಂಫರ್ಟಬಲ್ ಆಗಿರುವ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಉಪಯೋಗಿಸಬೇಕು, ಇದರಲ್ಲಿ ಏರುಪೇರಾದರೆ ದುಡಿವ ಮಹಿಳೆ ತೀವ್ರವಾದ ಕಾಲುನೋವು ಮಂಡಿನೋವು, ಬೆನ್ನುನೋವುಗಳಿಂದ ಬಳಲಬೇಕಾಗುತ್ತದೆ.ಬಾರ್ ಕಿತ್ತುಹೋದ,ಹೀಲ್ ಸಡಿಲಗೊಂಡ ಚಪ್ಪಲಿಗಳಿಗೆ ಪಿನ್ ತೂರಿಸಿ ಇರಲಿ ಹೇಗೋ ಆಡ್ಜಸ್ಟ್ ಮಾಡುವಾ ಎಂದು ಹಾಕಿಕೊಂಡು ಹೊರಟರೆ, ಬರ್ ಕಿತ್ತುಹೋಗಿ, ಇಲ್ಲವೇ ಪಿನ್ ಕಾಲಿಗೆ ಚುಚ್ಚಿ ಅನುಭವಿಸಬೇಕದ ಫಜೀತಿ ಅಷ್ಟಿಷ್ಟಲ್ಲ.ದುಡಿವ ಮಹಿಳೆ ಸಾಧ್ಯವಾದಷ್ಟೂ ಫ್ಲಾಟ್ ಹೀಲ್ ಇರುವ ಪಾದರಕ್ಶೆಗಳನ್ನೇ ಬಳಸುವುದು ಸುರಕ್ಷೆ, ಫ್ಯಾಷನ್ ಎಂದು ಹೈ ಹೀಲ್ಡ್ ಧರಿಸಿ ಅವಸರದಲ್ಲಿ ಗಡಿಬಿಡಿಯಿಂದ ಸಾಗುವಾಗ ಎಡವಿ ಬಿದ್ದು ಕೈಕಾಲು ಮುರಿದುಕೊಳ್ಳಬೇಕಾದೀತು, ಇಲ್ಲವೇ ಹಿಮ್ಮಡಿ, ಮೀನಖಂಡಗಳ ನೋವಿನಿಂದ ಜೀವನವಿಡೀ ನರಳಬೇಕಾದೀತು. ೨-ವ್ಯಾನಿಟಿ ಬ್ಯಾಗ್ -ಅಥವಾ ಜಂಭದ ಚೀಲ ಇದು ದುಡಿವ ಮಹಿಳೆಯ ಒಂದು ಅವಿಭಾಜ್ಯ ಅಂಗ.ಮಹಿಳೆಯ ಅಗತ್ಯಗಳು ಮಹಿಳೆಗೇ ಮಾತ್ರ ಅರ್ಥವಾಗುವಂಥಹವು.ಮನೆಯಿಂದ ಹಲವರು ಘಂಟೆಗಳ ಕಾಲ ಹೊರಗಿರುವ ಮಹಿಳೆಗೆ ತುರ್ತು ಸಮಯದಲ್ಲಿ ಬೇಕಾಗುವ ಎಲ್ಲಾ ವಸ್ತುಗಳಿಗೂ ಅತ್ಯಂತ ಸೂಕ್ತವಾದ ಸಂಗ್ರಹ ತಾಣ ಈ ವ್ಯಾನಿಟಿ ಬ್ಯಾಗ್.ಪೆನ್,ಐಡಿ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಚೆಕ್ ಪುಸ್ತಕ,ಕರ್ಚೀಫ್,ಕಂಫಿಟ್ ಪ್ಯಾಕ್,ಮೇಕಪ್ ವಸ್ತುಗಳು{ಪೌಡರ್,ಲಿಪ್ಸ್ಟಿಕ್ ಇತ್ಯಾದಿ),ಮಳೆಗಾಲದಲ್ಲಿ ಧರಿಸಿದ ಬಟ್ಟೆ ಒದ್ದೆಯಾದರೆ ಬದಲಿಸಲೊಂದು ಸೆಟ್ ಬಟ್ಟೆ, ಹಣ,ಟಿಫನ್ ಬಾಕ್ಸ್, ಮೊಬೈಲ್ ಹೀಗೆ ಏನೆಲ್ಲವನ್ನೂ ತನ್ನೊಡಲಲ್ಲಿ ಇಟ್ಟುಕೊಳ್ಳುವ ವ್ಯಾನಿಟಿ ಬ್ಯಾಗ್ ದುಡಿವ ಮಹಿಳೆಯ ಅತ್ಯಂತ ಆಪ್ತ ಸಂಗಾತಿ. ಎಡೆಬಿಡದೆ ಆಕೆಯ ಹೆಗಲಿಗೆ ಅಂಟಿಕೊಂಡೇ ಇರುವ ಪ್ರಿಯ ಗೆಳತಿ.ವ್ಯಾನಿಟಿಬ್ಯಾಗ್ ದೊಡ್ಡದಾಗಿದ್ದು, ಹಲವು ಕಂಪಾರ್ಟ್ಮೆಂಟ್ ಗಳನ್ನು ಹೊಂದಿದ್ದು, ಅದರ ಹೆಗಲ ಪಟ್ಟಿ, ಜಿಪ್ ಗಳು ಗಟ್ಟಿಮುಟ್ಟಾಗಿರಬೇಕಾದುದು ಅತ್ಯಗತ್ಯ,ಚೀಪ್ ಆಗಿ ಸಿಗುತ್ತೆ ಎಂದು ಅಗ್ಗದ ಬ್ಯಾಗ್ ಖರೀದಿಸಿ ಕಿತ್ತುಜೋಲಾಡುವ ಹೆಗಲಪಟ್ಟಿ,ಜಿಪ್ ಹಾಳಾಗಿ ವಿಕರಾಳವಾಗಿ ಬಾಯ್ತೆರೆದ ಬ್ಯಾಗಿನಿಂದ ಮುಜುಗರ ಅನುಭವಿಸುವುದಕ್ಕಿಂತ ಉತ್ತಮ ಗುಣಮಟ್ಟದ ದೊಡ್ದ ಬ್ಯಾಗ್ ಖರೀದಿಸಿದರೆ ಒಳ್ಳೆಯದು. ೩-ಆಭರಣಗಳು- ಮಹಿಳಾ ನರ್ಸ್, ಡಾಕ್ಟರ್ ಗಳಿಗೆ ಹೂವು ಮುಡಿಯುವುದು,ಬಳೆತೊಡುವುದು, ಸುಗಂಧ ದ್ರವ್ಯ ಬಳಸುವುದು,ಆಭರಣಗಳನ್ನು ತೊಡುವುದನ್ನು ನಿಷೇಧಿಸಲಾಗಿರುತ್ತೆ.ಅದರಿಂದ ರೋಗಿಗಳಿಗೆ ಕಿರಿಕಿರಿಯಾಗಬಹುದು, ರೋಗಿಗಳನ್ನು ಉಪಚರಿಸಲು ಅಡ್ಡಿಯಾಗಬಹುದು ಎಂಬುದು ಕಾರಣ, ಉಳಿದಂತೆ ದುಡಿವ ಮಹಿಳೆಯರು ಹೊರಗೆ , ವಾಹನಗಳಲ್ಲಿ ಓಡಾಡುವವರಾದ್ದರಿಂದ ಸಾಧ್ಯವಾದಷ್ಟೂ ಕಡಿಮೆ ಆಭರಣ, ಕಡಿಮೆ ಚಿನ್ನ ಧರಿಸುವುದು ಸುರಕ್ಷಿತ,ಟೇಬಲ್ ವರ್ಕ್ ಮಾಡುವ ಮಹಿಳೆಯರು ಕೈತುಂಬಾ ಬಳೆ ಧರಿಸಿದರೆ ಕೆಲಸ ಮಾಡುವುದಾದರೂ ಹೇಗೆ?ಘಲ್ ಘಲ್ ಎಂದು ಶಬ್ದಿಸುವ ಗೆಜ್ಜೆ ಧರಿಸಿ ಬರುತ್ತಿದ್ದ ಶಿಕ್ಷಕಿಯೋರ್ವರ ಬಗ್ಗೆ ಮಕ್ಕಳು ಮೋಹಿನಿ ಅಂತ ಆಡಿಕೊಳ್ಳುತ್ತಿದ್ದುದು, ಹೆಸರಿಟ್ಟಿದ್ದು ತಮಾಷಿಯಾಗಿತ್ತು, ೪-ಕೇಶವಿನ್ಯಾಸ- ನರ್ಸ್, ಏರ್ ಹೋಸ್ಟೆಸ್ ಮೊದಲಾದವರಿಗೆ ಕೂದಲನ್ನು ಉದ್ದಕ್ಕೆ ಬಿಡದೆ ನಿರ್ದಿಷ್ಟ ರೀತಿಯಲ್ಲಿ ಗಂಟುಕಟ್ಟಿಕೊಳ್ಳಬೇಕಿರುತ್ತದೆ.ಉಳಿದಂತೆ ಬೇರೆಲ್ಲಾ ವೃತ್ತಿಗಳಲ್ಲಿರುವವರು ಜಡೆ ಹೆಣೆದುಕೊಳ್ಳುವುದು,ವಿವಿಧರೀತಿಯಲ್ಲಿ ಗಂಟುಹಾಕಿಕೊಳ್ಳುವುದು, ಪೋನಿಟೈಲ್ ಕಟ್ಟುವುದು ಇದೆ.ಉದ್ದಜಡೆಯ ನಿರ್ವಹಣೆ ದುಡಿವಮಹಿಳೆಯರಿಗೆ ಕಷ್ಟವಾಗುವುದರಿಂದ ಕೂದಲನ್ನು ಗಿಡ್ದವಾಗಿ ಕತ್ತರಿಸಿಕೊಳ್ಳುವುದೂ ಸಾಮಾನ್ಯ.ವಿನ್ಯಾಸ ಯಾವುದೇ ಇದ್ದರೂ ಕೂದಲನ್ನು ಕೆದರಿಡದೇ ಒಪ್ಪವಾಗಿ ಬಾಚಿ ಇರಿಸುವುದು ಮುಖ್ಯ,ಸಾಮಾನ್ಯ ವರ್ಕಿಂಗ್ ದಿನಗಳಲ್ಲಿ ಸರಳ ಕೇಶವಿನ್ಯಾಸವೇ ಸಾಕು.ಕೆಲಸಕ್ಕೆ ಹೊರಡುವ ಮೊದಲು ತಲೆ ಸ್ನಾನ ಮಾಡಿ ಕೂದಲು ಸರಿಯಾಗಿ ಒಣಗಿಸಲು ಪುರುಸೊತ್ತು ಇಲ್ಲದೆ ಹಾಗೆಯೇ ಕಟ್ಟಿಕೊಂಡು ಕೆಲಸಕ್ಕೆ ಹೋಗುವುದರಿಂದ ಅನೇಕ ಖಾಯಿಲೆಗಳಿಗೆ ಕಾರಣವಾಗುತ್ತದೆ,ತಲೆಗೆ ಎಣ್ನೆ ಸ್ನಾನವನ್ನು ವಾರದ ರಜಾದಿನದಂದು ವಿರಾಮವಾಗಿ ಮಾಡುವ ಅಭ್ಯಾಸ ಒಳಿತು. ೫-ಕೊಡೆ- ದುಡಿವ ಮಹಿಳೆಯ ಕೈಯಲ್ಲಿ ಕೊಡೆ ಸಹ ಸಾಮಾನ್ಯವಾಗಿ ಕಾಣುವ ವಸ್ತು,ಬಿಸಿಲು ಮಳೆಯಿಂದ ರಕ್ಷಿಸಿಕೊಳ್ಳಲು ಅವಳಿಗೆ ಕೊಡೆ ಬೇಕೇ ಬೇಕು. ಕೆಲವರು ಅದೊಂದು ಭಾರ ಯಾಕೆ ಎಂದು ಕೊಡೆಯಿಲ್ಲದೆಯೇ ಓಡಾಡಿ ಮುಖ ಸುಟ್ಟ ಬದನೆಕಾಯಿಯಂತೆ ಮಾಡಿಕೊಂಡಿರುತ್ತಾರೆ.ಕೊಡೆ ಕೈಯಲ್ಲಿದ್ದರೆ ಬಿಸಿಲು ಮಳೆಯಿಂದ ರಕ್ಷಣೆ ಮಾತ್ರವಲ್ಲದೆ, ಒಂದು ಆಯುಧವೇ ಕೈಯಲ್ಲಿದ್ದಂತೆ.ಬಿಸಿಲಿನ ತಾಪಕ್ಕೆ ಆಯಾಸ , ತಲೆತಿರುಗು ಉಂಟಾಗಿ ಕಚೇರಿ ಕೆಲಸ ಮಾಡಲಾಗದೇ ಹೋಗಬಹುದು, ಒದ್ದೆಯಾದರೆ ಶೀತ ಜ್ವರದಿಂದ ನರಳಿ ಕಚೇರಿಗೆ ರಜೆ ಮಾಡಬೇಕಾದ ಪ್ರಸಂಗ ಬರಬಹುದು, ಆದ್ದರಿಂದ ದುಡಿಯುವ ಮಹಿಳೆಯ ಕೈಗೆ ಕೊಡೆಯೂ ಒಂದು ಶೋಭೆ. ೬-ಲಂಚ್ ಬಾಕ್ಸ್- ಹೆಚ್ಚಾಗಿ ದುಡಿವ ಮಹಿಳೆಯರೆಲ್ಲರ ಮತ್ತೊಂದು ಬೆಂಬಿಡದ ಸಂಗಾತಿ ಟಿಫನ್ ಬಾಕ್ಸ್/ ಲಂಚ್ ಬಾಕ್ಸ್ ಅಥವಾ ಊಟದ ಡಬ್ಬಿ. ಬೆಳಗಿನ ಅವಸರದಲ್ಲಿ ಮಾಡಿಟ್ಟ ತಿಂಡಿ ತಿನ್ನಲೂ ದುಡಿವ ಮಹಿಳೆಗೆ ಪುರುಸೊತ್ತು ಇರುವುದಿಲ್ಲ.ಅಥವಾ ಅವಸರದಲ್ಲಿ ಒಂದೆರಡು ತುತ್ತು ನುಂಗಿ ಮಧ್ಯಾಹ್ನಕ್ಕೆಂದು ಡಬ್ಬಿಯಲ್ಲಿ ಅದೇ ಬೆಳಗಿನ ತಿಂಡಿಯನ್ನೋ, ಇಲ್ಲ ಅನ್ನ ಚಿತ್ರಾನ್ನವೋ, ಬ್ರೆಡ್ಡೋ ಏನೋ ಒಂದನ್ನು ತುಂಬಿಸಿಕೊಂಡು ಬ್ಯಾಗ್ನಲ್ಲಿ ಇಟ್ಟುಕೊಂಡು ಹೊರಟುಬಿಡುತ್ತಾಳೆ.ಕಚೇರಿಯಲ್ಲಿ ಮಧ್ಯಾಹ್ನದವರೆಗೆ ಕೆಲಸ ಮಾಡಿದವಳಿಗೆ ಲಂಚ್ ಬ್ರೇಕ್ ಗೆ ಮುನ್ನವೇ ಹೊಟ್ಟೆ ಚುರುಗುಡತೊಡಗುತ್ತೆ. ಲಂಚ್ ಬ್ರೇಕ್ ನಲ್ಲಿ ಬಾಕ್ಸ್ ತೆರೆದು ತಿನ್ನಲಿಟ್ತರೆ ಅದು ತಣಿದು, ಇಲ್ಲವೇ ಗಟ್ಟಿಯಾಗಿ ಗಂಟಲಲ್ಲೇ ಇಳಿಯಲಾರದು, ನಿಮ್ಮ ಲಂಚ್ ಅನ್ನು ಗಂಟೆಗಟ್ಟಲೆ ತಾಜಾ ಆಗಿಡುತ್ತೆ ಎಂದು ಎಷ್ಟೆಲ್ಲ ಜಾಹೀರಾತು ನೀಡಿದರೂ ೫-೬ ಗಂಟೆಗಳ ಕಾಲ ನಮ್ಮ ಆಹಾರವನ್ನು ತಾಜಾ, ಮತ್ತು ಬಿಸಿಯಾಗಿಡುವ ಯಾವುದೇ ಲಂಚ್ ಬಾಕ್ಸ್ ಇಲ್ಲವೇ ಇಲ್ಲ.ಒಮ್ಮೊಮ್ಮೆ ಅದನ್ನು ತಿನ್ನಲಾಗದೆ ಹಾಗೇ ಬಿಡುವುದಾದರೂ,ಮತ್ತೆ ವಿಧಿಯಿಲ್ಲದೆ ಅದನ್ನೇ ನುಂಗಿ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ,ಕೆಲವೊಮ್ಮೆ ಕಚೇರಿ ಸಹೋದ್ಯೋಗಿಗಳೊಡನೆ ಬಾಕ್ಸ್ ಹಂಚಿಕೊಳ್ಳುತ್ತಾ ತಮಾಷೆಯ ಮಾತುಗಳನ್ನಾಡುತ್ತಾ ತಿನ್ನುವುದು ಖುಶಿ ಕೊಡುತ್ತದೆ. ಲಂಚ್ ಬಾಕ್ಸ್ ಸಹೋದ್ಯೋಗಿಗಳೊಡನೆ ಉತ್ತಮ ಬಾಂಧವ್ಯ ಬೆಸೆಯುವ ಕೊಂಡಿಯೂ ಆಗುತ್ತದೆ.ಲಂಚ್ ಬಾಕ್ಸ್ ತರಲು ಸೋಮರಿತನಪಟ್ಟು ಕ್ಯಾಂಟೀನ್, ಹೋಟೆಲ್ ಮೊರೆಹೊಗುವುದು ದುಬಾರಿ ಮಾತ್ರ್ವಲ್ಲ ,ಅನಾರೋಗ್ಯಕರವೂ ಹೌದು. RESHMA A S Personality can be assessed by what you wear says many, But it is also said that it is foolishness to evoluate a person from his dress.Both are in a way true to some extent.At home we can wear what we like, but when we go outside, and work for the whole day we have to follow certain dresscode,and be presentable.Usually there will be dresscode for both working men and women which differs from job to job, industry to industry, office to office, nation to nation. Working women have to work along with men and other women,and interact with many consumers.So according to the demands of work environment, traditions,comfort, special dresscode for working women are enforced everywhere, some directly, and some indirectly.for some professions there is special strict dresscode -uniforms-for example-Nurses-doctors-airhostesses-drivers-conductors- As for other professions though there is no uniform dresscode there will be hidden dresscode which the women workers are expected to follow- for example lady teachers are expected to wear saris only.It is believed that if a lady teacher or lecturer wears dresses other than sari, the students do not respect them.But i hv seen lady lecturers/ teachers of some private colleges and schools wearing mod dresses, and are never disrespected by their students,Actually sari is the sexyiest dress which reveals body line, and is not very comfortable, and makes one very concious.Chudidar or punjabi dress is the best and comfortable dress which covers most of the body and helps easy/ free movements .Wearing a coat on the dress/ sari is also acceptable.In Arab countries strict traditional dresscode for women is introduced. Wearing reveaing or indecent clothes is punishable in those countries., The common things working women have to follow about there dress are as follows- 1-Dress in a decent way 2-stay neat always 3-Maintain dignity of your work place and your personality 4-If work in a fashion environment,do dress that suits the environment, 5-Do not wear very tight/ very loose dresses, wear comfortable dress. 6-Do nor wear transparent , deep neckline dresses 7-wear proper undergarments, either skincolored or of the same colors of your dress. 8-Dress, so that you look smart, presentable,comfortable, decent. Aworking womans weapons are 1-vanity bag-2-footwear. 3-umbrella, 4-tiffenbox.These things play very importnt roles in a working womans life, 1-VANITY BAG Avanity bag is the essential inseperable, important thing which is always seen hanging from a working womans shoulder.Aworking woman keeps pen, kerchief,makeup materials,tiffen box,folding umbrella, waterbottle,medicines like headache, cold, caugh tablets,kamphit spare packet,comb, money--ohhh the list goes on-in her vanity bag.It serves as the saviour in need to her.Avanity bag should be big,with many compartments, strong shoulder straps and good quality jips and inner linings.Some go for cheap rates and after buying cheap bags suffer a lot with cut down straps,holes in the inner linings, jips those cannot be pulled and shut.So it is always better to buy quality bags. 2 FOOTWEAR Aworking woman must choose flat heeled, soft and good quality slippers which also fits well and is comfortable.Cheaper slippers will give lot of troubles.high heeled slippers,unsized slippers,will make her suffer from swelling, pain in feet, joint pain, and also backpain.Some times she may stumble and fall,which leaves her injured,bonr fractured. 3-UMBRELLA- To get protection from heat, and rain wrking woman who sometimes need to walk a lot outside, needs umbrella.This too should be of good quality.Some think that carrying an umbrella is a burden, and often get sun burnt, wet in rain,which leads to many cold related discesses,and dakens the face, arms,back, and she also suffers fatigue.These may affect her work standards too.An umbrella in hand can be used as a weapon too . 4-Tiffen box- Tiffen box is also an essential thing a working woman cannot part with.A working woman usually will not be able to have her breakfast in the morning due to all busy preparetions, So she fills her lunch box and carries with her.In her office when she gets leisure,she opens her lunchbox and eats the food that has become cold,stiffened,There is no lunch box which keeps your food warm and fresh, even if advertisements about lunch/ tiffen boxes say a lot.Some times she cannot eat the cold, stiffened food, but some times when she is tired, overworked, hungry, the same cold, stiffened food tastes good.Every day she cannot have food in canteen or hotels. it will be a costly affair.So she preffers to carry a lunch/tiffen box with her to office, Many working women during lunch break in ladiesroom share their foodies with their colleauges which helps strengthening the friendship and create a friendly atmosphere in the office. 5-JEWELS- It is better to avoid flashy jewelleries/gold jewelleries as it is always dangerous.Even do not display the gold mangalsutra , cover it inside your dress so that chain snatures do not take a chance.Nurses and Doctors are not allowed to wear flowers in hair, bangles, and perfumes as these may irritate, distract the patients and also these may act as obstacles in serving the patients. HAIR STYLE- In some professions like like nursing,airhostesses strict hairstyle code is introduced-hairs should be tied in to knots and hoods also should be fixed. As for other working women no such rules- they either plait their hair, let fall loose up to shoulders,tie in to a pony tail,tie in to knots. Some working women find it difficult to manage, care their long hair, so do they cut them in to short bob.What ever is your hairstyle,keep your hair clean, tidy, well combed.Do not take oil headbath on working days, if the washed hairs are not properly dried you will suffer with head ache, cold, fever, It is better to plan oil head baths on sundays, and holidays.

No comments:

Post a Comment